ಹಾಕಿ ಟೂರ್ನಿ ಕುಂಡ್ಯೋಳಂಡ ಕಪ್ | ಉತ್ತಪ್ಪ ಹ್ಯಾಟ್ರಿಕ್‌: ಸಣ್ಣುವಂಡ ತಂಡಕ್ಕೆ ಜಯ ನಾಪೋಕ್ಲು (ಕೊಡಗು ಜಿಲ್ಲೆ): ಎಸ್.ಕೆ. ಉತ್ತಪ್ಪ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಸಣ್ಣುವಂಡ ತಂಡವು ಕೊಡವ ಕೌಟುಂಬಿಕ ಹಾಕಿ ಟೂರ್ನಿ ಕುಂಡ್ಯೋಳಂಡ ಕಪ್‌ನಲ್ಲಿ ಭಾನುವಾರ ಮೂಕಚಂಡ ತಂಡದ ವಿರುದ್ಧ 7–1ರಿಂದ ಭಾರಿ ಅಂತರದ ಜಯ ಸಾಧಿಸಿತು. ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಚಂದನ್ ಕಾರ್ಯಪ್ಪ ಅವರ 4 ಗೋಲುಗಳ ನೆರವಿನಿಂದ ಮಂಡೇಪಂಡ ತಂಡವು ನಾಳಿಯಂಡ ವಿರುದ್ಧ 6–1 ಅಂತರದಿಂದ ಜಯ ಗಳಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಇನ್ನೊಂದು ಪಂದ್ಯದಲ್ಲಿ ಅಜ್ಜಮಾಡ ಹಾಗೂ ಕೊಂಡೀರ ತಂಡಗಳು ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟ್ಔಟ್‌ನಲ್ಲಿ ದೊರೆತ ಅವಕಾಶದಿಂದ ಅಜ್ಜಮಾಡ ತಂಡವು 6–5 ಅಂತರದಿಂದ ಗೆಲುವಿನ ನಗೆ ಬೀರಿತು. ಇತರೆ ಪಂದ್ಯಗಳ ಫಲಿತಾಂಶ: ಕೋಡಿಮಣಿಯಂಡ ತಂಡವು ತೀತರಮಾಡ ವಿರುದ್ಧ 1–0 ಅಂತರದಿಂದ; ಬಾದುಮಂಡ ತಂಡವು ಕಬ್ಬಚ್ಚಿರ ವಿರುದ್ಧ 1–0 ಅಂತರದಿಂದ; ಮುಕ್ಕಾಟಿರ (ಹರಿಹರ) ತಂಡವು ಕೋಳಿರ ವಿರುದ್ಧ 3–0 ಅಂತರದಿಂದ; ಮಂಡೇಟಿರ ತಂಡವು ಕುಟ್ಟೇಟಿರ ವಿರುದ್ಧ 4–0 ಅಂತರದಿಂದ; ಬೊವ್ವೇರಿಯಂಡ ತಂಡವು ಕಾವಡಿಚಂಡ ವಿರುದ್ಧ 2–0 ಅಂತರದಿಂದ; ಮೇವಡ ತಂಡವು ಅಜ್ಜಿಕುಟ್ಟೀರ ವಿರುದ್ಧ 3–0 ಅಂತರದಿಂದ ಜಯ ಗಳಿಸಿದವು. ಅಪ್ಪಡೇರಂಡ ತಂಡವು ಪುಗ್ಗೇರ ವಿರುದ್ಧ 4–1 ಅಂತರದಿಂದ; ಚಂದುರ ತಂಡವು ಕೋಡಂಡ ವಿರುದ್ಧ 1–0 ಅಂತರದಿಂದ; ಗಂದಂಗಡ ತಂಡವು ಆಲೆಮಾಡ ವಿರುದ್ಧ 1–0 ಅಂತರದಿಂದ; ಕಾಳಿಮಾಡ ತಂಡವು ಉದ್ದಪಂಡ ವಿರುದ್ಧ 1–0 ಅಂತರದಿಂದ; ಮುಂಡಚಾಡಿರ ತಂಡವು ಬೇರೆರ ವಿರುದ್ಧ 1–0 ಅಂತರದಿಂದ; ನಾಗಂಡ ತಂಡವು ಕೋಣಿಯಂಡ ವಿರುದ್ಧ 1–0 ಅಂತರದಿಂದ; ಚೇರಂಡ ತಂಡವು ಕೈಬುಲಿರ ವಿರುದ್ಧ 3–0 ಅಂತರದಿಂದ; ಚಿಮ್ಮಣಮಾಡ ತಂಡವು ಗುಮ್ಮಟ್ಟಿರ ವಿರುದ್ಧ 3–1 ಜಯ ಸಾಧಿಸಿದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.