: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ ಶಾಂಘೈ: ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ (ಸ್ಟೇಜ್ 1)ರಲ್ಲಿ ಭಾರತೀಯ ಸ್ಪರ್ಧಿಗಳು 'ಹ್ಯಾಟ್ರಿಕ್' ಚಿನ್ನ ಸಾಧನೆ ಮಾಡಿದ್ದಾರೆ. ಭಾರತದ ಪುರುಷರ ಹಾಗೂ ಮಹಿಳೆಯರ ಕಾಂಪೌಂಡ್ ತಂಡಗಳು ಚಿನ್ನದ ಪದಕಗಳನ್ನು ಗೆದ್ದಿವೆ. ಮಿಶ್ರ ತಂಡ ವಿಭಾಗದಲ್ಲೂ ಭಾರತ ಸ್ವರ್ಣ ಪದಕ ಗೆದ್ದಿದೆ. ಆ ಮೂಲಕ ಕ್ಲೀನ್-ಸ್ವೀಪ್ ಸಾಧನೆಗೈದಿದೆ. ಮಹಿಳಾ ಕಾಂಪೌಂಡ್ ವಿಭಾಗದಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರನೀತ್ ಕೌರ್ ಚಿನ್ನ ಸಾಧನೆ ಮಾಡಿದರು. ಭಾರತೀಯ ಮಹಿಳಾ ಕಾಂಪೌಂಡ್ ತಂಡವು ಇಟಲಿ ವಿರುದ್ಧ 236-225 ಅಂಕಗಳ ಅಂತರದಿಂದ ಜಯ ಸಾಧಿಸಿತು. ಪುರುಷರ ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್ ವರ್ಮಾ, ಪ್ರಿಯಾಂಶ್ ಮತ್ತು ಪ್ರಥಮೇಶ್ ಫೈನಲ್‌ನಲ್ಲಿ ನೆದರ್ಲೆಂಡ್ ವಿರುದ್ಧ 238-231ರ ಅಂತರದ ಜಯ ಸಾಧಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಮಿಶ್ರ ತಂಡ ವಿಭಾಗದಲ್ಲಿ ಜ್ಯೋತಿ ಹಾಗೂ ಅಭಿಷೇಕ್, ಎಸ್ಟೋನಿಯಾ ವಿರುದ್ಧ 158-157ರ ಅಂತರದ ರೋಚಕ ಗೆಲುವು ಸಾಧಿಸಿ ಚಿನ್ನ ಪದಕವನ್ನು ಗೆದ್ದಿದ್ದಾರೆ. - ! 🏹# ' , 238-231 🥇! ! 🇮🇳# ../iLwFz74qs4 -!! 🎯 ' , 🥇 # - 1, 236-226. , ! 🎉# ../ ! 🥇🇮🇳 . # # @india_archery ../jKwkR546Md . . 🥇🇮🇳# # @india_archery ../ . 😮‍💨🇮🇳 @ 1 .# # @india_archery ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.