ಬಾಕ್ಸಿಂಗ್ ಚಾಂಪಿಯನ್‌ಷಿಪ್ | ವಿಶ್ವನಾಥ್, ಆಕಾಶ್ ಸೆಮಿಗೆ ಆಸ್ತಾನ, ಕಜಕಸ್ತಾನ: ವಿಶ್ವನಾಥ್ ಸುರೇಶ್, ಆಕಾಶ್ ಗೋರ್ಖಾ ಮತ್ತು ಪ್ರೀತ್ ಮಲಿಕ್ ಅವರು ಇಲ್ಲಿ ನಡೆಯುತ್ತಿರು ಏಷ್ಯನ್ 22 ವರ್ಷದೊಳಗಿನವರ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಸೆಮಿಫೈನಲ್ ಪ್ರವೇಶಿಸಿದರು. ಮಂಗಳವಾರ ನಡೆದ 48 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ ಬೌಟ್‌ನಲ್ಲಿ ವಿಶ್ವನಾಥ್ ಅವರು 5–0ಯಿಂದ ಇರಾನ್‌ ದೇಶದ ಹಸಾನಿ ಸೆಯೆದರ್ಶಮ್ ವಿರುದ್ಧ ಜಯಿಸಿದರು. ವಿಶ್ವನಾಥ್ ಅವರು ಹಾಲಿ ಯೂತ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದಾರೆ. 60 ಕೆ.ಜಿ. ವಿಭಾಗದ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಆಕಾಶ್ 5–0ಯಿಂದ ಇರಾನ್‌ನ ಇಬಾದಿ ಅರ್ಮಾನ್ ವಿರುದ್ಧ ಗೆದ್ದರು. 67 ಕೆ.ಜಿ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ್ದ ಪ್ರೀತ್ ಅವರು ವಿಯೆಟ್ನಾಮ್‌ನ ಎನ್‌ಗುಯೆನ್ ಡಕ್ ಎನ್‌ಗಾಕ್ ವಿರುದ್ಧ ಮೇಲುಗೈ ಸಾಧಿಸಿದರು. ರೆಫರಿ ಈ ಬೌಟ್‌ ಸ್ಥಗಿತಗೊಳಿಸುವ ಮುನ್ನ (ಆರ್‌ಎಸ್‌ಸಿ) ಮೊದಲ ಸುತ್ತಿನಲ್ಲಿ ಪ್ರೀತ್ ಮೇಲುಗೈ ಸಾಧಿಸಿದ್ದರು. 75 ಕೆ.ಜಿ. ವಿಭಾಗದಲ್ಲಿ ಕುನಾಲ್ 0–5ರಿಂದ ಇರಾನ್‌ನ ಮಹಾಶರಿ ಮೊಹಮ್ಮದ್ ವಿರುದ್ಧ ಸೋತರು. ಜುಗನು (86 ಕೆ.ಜಿ), ರಿಧಂ (+92 ಕೆಜಿ), ತಮನ್ನಾ (50 ಕೆಜಿ), ಪ್ರೀತಿ (54 ಕೆ.ಜಿ) ಮತ್ತು ಪ್ರಿಯಾಂಕಾ (60 ಕೆಜಿ) ಕ್ವಾರ್ಟರ್‌ಫೈನಲ್‌ನಲ್ಲಿ ಕಣಕ್ಕಿಳಿಯುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.