ಬ್ಯಾಸ್ಕೆಟ್‌ಬಾಲ್‌: ಭಾರತ್‌ಗೆ ಜಯ ಬೆಂಗಳೂರು: ಅಕ್ಷಯ್‌ ಪ್ರಸಾದ್‌ ಮತ್ತು ನಕುಲ್ ಅವರ ಆಟದ ಬಲದಿಂದ ಭಾರತ್‌ ಎಸ್‌.ಯು ತಂಡವು ಎಂ.ಸಿ. ಶ್ರೀನಿವಾಸ ಸ್ಮರಣಾರ್ಥ ರಾಜ್ಯ ‘ಬಿ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ರೋಚಕ ಹಣಾಹಣಿಯಲ್ಲಿ 84–82ರಿಂದ ಕೋರಮಂಗಲ ಎಸ್‌.ಸಿ ತಂಡವನ್ನು ಮಣಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ 41–39ರಿಂದ ಮುನ್ನಡೆ ಪಡೆದಿದ್ದ ಭಾರತ್‌ ತಂಡವು ಉತ್ತರಾರ್ಧದಲ್ಲೂ ಹಿಡಿತ ಸಾಧಿಸಿತು. ಅಕ್ಷಯ್‌ ಮತ್ತು ನಕುಲ್ ತಲಾ 29 ಪಾಯಿಂಟ್ಸ್‌ ಗಳಿಸಿದರು. ಕೋರಮಂಗಲ ತಂಡದ ರಿಷಭ್‌ 18, ಡೇನಿಯಲ್ 15 ಅಂಕ ಗಳಿಸಿದರು. ಇತರ ಪಂದ್ಯಗಳ ಫಲಿತಾಂಶ: ಬೆಳಿಗ್ಗೆ ನಡೆದ ಪಂದ್ಯದಲ್ಲಿ ಎಂಎನ್‌ಕೆ ರಾವ್‌ ಪಾರ್ಕ್‌ ಬಿಸಿ 85–72ರಿಂದ ವಿಮಾನಪುರ ಎಸ್‌.ಸಿ ತಂಡವನ್ನು; ಕೆಎಸ್‌ಪಿ 70–33 ರಿಂದ ದೇವಾಂಗ ಯೂನಿಯನ್‌ ತಂಡವನ್ನು ಮಣಿಸಿತು. ಸಂಜೆ ನಡೆದ ಪಂದ್ಯದಲ್ಲಿ ಎಂಎಸ್‌ಕೆ 69–57ರಿಂದ ಕೋರಮಂಗಲ ಎಸ್‌ಸಿ ತಂಡವನ್ನು; ಕೆಎಸ್‌ಪಿ 81–54ರಿಂದ ವಿಮಾನಪುರ ತಂಡವನ್ನು; ಭಾರತ್‌ 69–61ರಿಂದ ದೇವಾಂಗ ಯೂನಿಯನ್‌ ತಂಡವನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.