| ಹಾಕಿಯಲ್ಲಿ ಕಂಚು: ಆಟಗಾರರ ಕುಟುಂಬಗಳ ಸಂಭ್ರಮಾಚರಣೆ ನವದೆಹಲಿ: ಸ್ಪೇನ್ ತಂಡವನ್ನು 2–1ರಿಮದ ಮಣಿಸುವ ಮೂಲಕ ಭಾರತ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದೆ. 52 ವರ್ಷಗಳಲ್ಲಿ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ದಿಗ್ಗಜ ಗೋಲ್‌ಕೀಪರ್ ಪಿ.ಆರ್‌. ಶ್ರೀಜಿತ್‌ಗೆ ಗೆಲುವಿನ ಮೂಲಕ ವಿದಾಯ ಹೇಳಿದೆ. ಭಾರತ ತಂಡ ಕಂಚು ಗೆಲ್ಲುತ್ತಿದ್ದಂತೆ ಆಟಗಾರರ ಕುಟುಂಬ ಮತ್ತು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ಕೇರಳದ ಎರ್ನಾಕುಲಂನಲ್ಲಿರುವ ಶ್ರೀಜಿತ್ ಕುಟುಂಬವು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕುಟುಂಬ ಸದಸ್ಯರು ಅತೀವ ಸಂತಸ ವ್ಯಕ್ತಪಡಿಸಿದರು. # | ' #ParisOlympics2024 ' , ' . ../6VslHz56mX # | 2024 | ' , 2-1. ' , ' , , " . … ../Jx4WgRkmUN ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಸೋನಿಪತ್‌ನಲ್ಲಿರುವ ಹಾಕಿ ಆಟಗಾರ ಸುಮಿತ್ ಕುಟುಂಬ ಸದಸ್ಯರು ಸಹ ಸಂತಸ ವ್ಯಕ್ತಪಡಿಸಿದರು. # | #ParisOlympics2024 | ' 2-1 . ../cGLkOLQLF1 ವಾರಣಾಸಿಯಲ್ಲಿರುವ ಹಾಕಿ ಆಟಗಾರ ಲಲಿತ್ ಉಪಾಧ್ಯಾಯ್ ಮನೆಯಲ್ಲೂ ಸಂತಸ ಮನೆ ಮಾಡಿತ್ತು. # | , : #ParisOlympicGames2024 ../TCDUgGaZ93 ಇದು ನಿಜಕ್ಕೂ ಒಳ್ಳೆ ಸುದ್ದಿ. ಫೈನಲ್‌ನಲ್ಲಿ ಭಾರತ ಹಾಕಿ ತಂಡ ಸೋತಾಗ ಆಘಾತವಾಗಿತ್ತು ಎಂದು ಶ್ರೀಜಿತ್ ಮಗಳು ಅನುಶ್ರೀ ಹೇಳಿದ್ದಾರೆ. # | 2024 | ' , 2-1. ' , ' , "... . … ../ ಮಧ್ಯ ಪ್ರದೇಶದಲ್ಲಿರುವ ಹಾಕಿ ಆಟಗಾರ ವಿವೇಕ್ ಸಾಗರ್ ಮನೆಯಲ್ಲಿ ಸೇರಿದ್ದ ಸಂಬಮಧಿಕರು ಜಯಘೋಷ ಮೊಳಗಿಸಿ ಭಾರತ ಹಾಕಿ ತಂಡ ಕಂಚು ಗೆದ್ದ ಖುಷಿಯನ್ನು ವ್ಯಕ್ತಪಡಿಸಿದರು. # | #ParisOlympics2024 | : ' 2-1 . ../ ಪಂಜಾಬ್‌ನ ಜಲಂಧರ್‌ನಲ್ಲಿರುವ ಸುಖಜೀತ್ ಸಿಂಗ್ ಕುಟುಂಬ ವರ್ಗ ದೂರವಾಣಿ ಮೂಲಕ ಮಾತನಾಡಿ ಅಭಿನಂದನೆ ತಿಳಿಸಿದರು. ಕುಣಿದು ಸಂಭ್ರಮಾಚರಣೆ ಮಾಡಿದರು. # | , : ../7csMbBvh6x ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.