ಟೇಬಲ್‌ ಟೆನಿಸ್‌: ಆಕಾಶ್‌, ಖುಷಿಗೆ ಪ್ರಶಸ್ತಿ ಬೆಂಗಳೂರು: ಆಕಾಶ್‌ ಕೆ.ಜೆ. ಮತ್ತು ಖುಷಿ ವಿ. ಅವರು ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ವಿವಿ ಪುರಂನ ಮ್ಯಾಚ್‌ ಪಾಯಿಂಟ್‌ನಲ್ಲಿ ಗುರು‌ವಾರ ನಡೆದ ಪುರುಷರ ಫೈನಲ್‌ನಲ್ಲಿ ಆಕಾಶ್‌ 9-11, 11-8, 11-4, 13-11, 11-8ರಿಂದ ಯಶವಂತ್‌ ಪಿ. ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಆಕಾಶ್‌ ಅವರು ಎಂ. ಕಲೈವನನ್ ವಿರುದ್ಧ; ಯಶವಂತ್‌ ಅವರು ಅಭಿನವ್ ಕೆ. ಮೂರ್ತಿ ವಿರುದ್ಧ ಗೆಲುವು ಸಾಧಿಸಿದ್ದರು. ಮಹಿಳೆಯರ ಫೈನಲ್‌ನಲ್ಲಿ ಖುಷಿ 7-11, 11-4, 5-11, 11-8, 9-11, 11-9, 11-5ರಿಂದ ಅನರ್ಘ್ಯ ಮಂಜುನಾಥ್ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಖುಷಿ ಅವರು ಪ್ರಣವಿ ಅವರನ್ನು; ಅನರ್ಘ್ಯ ಅವರು ನಿಹಾರಿಕಾ ಎ. ವಿರುದ್ಧ ಗೆಲುವು ಸಾಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.