ಅಂತರ ಕಾಲೇಜು ಕಬಡ್ಡಿ: ಕುಣಿಗಲ್‌ ಪ್ರಥಮ ಕುಣಿಗಲ್: ತುಮಕೂರು ವಿವಿ ಅಂತರ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆಯಿತು. ಕುಣಿಗಲ್ ಕಾಲೇಜು ತಂಡ ಪ್ರಥಮ, ತಿಪಟೂರು ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಒಟ್ಟು 8 ತಂಡಗಳು ಭಾಗವಹಿಸಿದ್ದು, ಅತ್ಯತ್ತಮ ರೈಡರ್ ಪ್ರಶಸ್ತಿಯನ್ನು ಕುಣಿಗಲ್ ಕಾಲೇಜಿನ ಮೈತ್ರಾ, ಅತ್ಯತ್ತಮ ಕ್ಯಾಚರ್ ಪ್ರಶಸ್ತಿಯನ್ನು ತಿಪಟೂರು ಕಾಲೇಜಿನ ಶಿವಗಾಯತ್ರಿ ಮತ್ತು ಆಲ್ ರೌಂಡರ್ ಪ್ರಶಸ್ತಿಯನ್ನು ಕುಣಿಗಲ್ ಕಾಲೇಜಿನ ವಿನುತಾ ಪಡೆದುಕೊಂಡರು. ಬಹುಮಾನಗಳನ್ನು ಪ್ರಾಂಶುಪಾಲೆ ಮಾಯಾ ಸಾರಂಗಪಾಣಿ ವಿತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವೀಶ್, ಪ್ರಾಧ್ಯಾಪಕರಾದ ಗೋವಿಂದರಾಯ, ರಾಮಾಂಜನೇಯ, ಶಿವರಾಮ ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.