ಟೇಬಲ್‌ ಟೆನಿಸ್‌ ಟೂರ್ನಿ: ಅಥರ್ವ, ತನಿಷ್ಕಾ ಚಾಂಪಿಯನ್‌ ಬೆಂಗಳೂರು: ಅಥರ್ವ ನವರಂಗ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ 15 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿಯನ್ನು ಗೆದ್ದುಕೊಂಡರು. ವಿವಿ ಪುರಂನ ಮ್ಯಾಚ್‌ ಪಾಯಿಂಟ್‌ನಲ್ಲಿ ಶನಿವಾರ ನಡೆದ ಬಾಲಕರ ಫೈನಲ್‌ನಲ್ಲಿ ಅಥರ್ವ 11-8, 11-8, 11-8ರಿಂದ ಅರ್ನವ್ ಎನ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅಥರ್ವ ಅವರು ಸಿದ್ಧಾಂತ್ ಧರಿವಾಲ್ ವಿರುದ್ಧ; ಅರ್ನವ್‌ ಅವರು ಗೌರವ್‌ ಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ಬಾಲಕಿಯರ ಫೈನಲ್‌ನಲ್ಲಿ ತನಿಷ್ಕಾ 11-8, 11-6, 11-6ರಿಂದ ಹಿಯಾ ಸಿಂಗ್‌ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ತನಿಷ್ಕಾ ಅವರು ಆಯುಷಿ ಬಿ. ಗೋಡ್ಸೆ ವಿರುದ್ಧ; ಹಿಯಾ ಅವರು ಕೈರಾ ಬಾಳಿಗ ವಿರುದ್ಧ ಜಯ ಸಾಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.