ಮಹಿಳಾ ‍ಪ್ರೊ ಗಾಲ್ಫ್‌: ಒಂಬತ್ತನೇ ಲೆಗ್‌ನಲ್ಲಿ ವಿಧಾತ್ರಿಗೆ ಪ್ರಶಸ್ತಿ ಹೊಸೂರು (ತಮಿಳುನಾಡು): ಮೈಸೂರಿನ ವಿಧಾತ್ರಿ ಅರಸ್‌ ಅವರು ಇಲ್ಲಿನ ಕ್ಲೋವರ್‌ ಗ್ರೀನ್ಸ್‌ನಲ್ಲಿ ಶುಕ್ರವಾರ ಮುಕ್ತಾಯಗೊಂಡ ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ ಒಂಬತ್ತನೇ ಲೆಗ್‌ನಲ್ಲಿ ವಿಜೇತರಾದರು. ವೃತ್ತಿಪರ ಗಾಲ್ಫರ್‌ ಆದ ನಂತರ ಇದು ಅವರ ಮೊದಲ ಪ್ರಶಸ್ತಿ. ಅಮೆಚೂರ್ ಆಗಿ ಅವರು ಈ ಹಿಂದೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಾನ್ವಿ ಸೋಮು ಅವರು ಎರಡನೇ ಸ್ಥಾನ ಪಡೆದರು. ಅನುಭವಿ ಗಾಲ್ಫರ್‌ ಗೌರಿಕಾ ಬಿಷ್ಣೋಯಿ ಮೂರನೇ ಸ್ಥಾನ ಗಳಿಸಿದರು. ವೃತ್ತಿಪರರಾದ ಮೇಲೆ ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಮೂರನೇ ಸ್ಥಾನ ಪಡೆದಿದ್ದರು. ಆದರೆ ಈ ಲೆಗ್‌ನ ಆರಂಭದಿಂದಲೇ ಉತ್ತಮ ನಿರ್ವಹಣೆ ತೋರಿದರು. ಖುಷಿ ಖಾನಿಜಾವು, ಶ್ವೇತಾ ಮಾನಸಿಂಗ್ ಮತ್ತು ಸ್ನೇಹಾ ಸಿಂಗ್ ನಾಳ್ಕನೇ ಸ್ಥಾನಕ್ಕೆ ಟೈ ಆದರು. ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ ಹತ್ತನೇ ಲೆಗ್ ಇದೇ ತಿಂಗಳ 23 ರಿಂದ 26ರವರೆಗೆ ಬೆಂಗಳೂರಿನ ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ನಲ್ಲಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.