ವಾಲಿಬಾಲ್‌: ಭಾರತ ಯು-20 ತಂಡಕ್ಕೆ ಲಕ್ಷ್ಮೀನಾರಾಯಣ ಕೋಚ್‌ ಬೆಂಗಳೂರು: ಕರ್ನಾಟಕದ ಕೆ.ಆರ್‌.ಲಕ್ಷ್ಮೀನಾರಾಯಣ ಅವರು ಇಂಡೊನೇಷ್ಯಾದ ಸುರಬಯದಲ್ಲಿ ಇದೇ 23 ರಿಂದ 30ರವರೆಗೆ ನಡೆಯಲಿರುವ 20 ವರ್ಷದೊಳಗಿನ ಪುರುಷರ ಏಷ್ಯನ್ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಹೆಡ್‌ ಕೋಚ್‌ ಆಗಿದ್ದಾರೆ. ಎಫ್‌ಐವಿಬಿ ಪುರುಷರ 21 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ಗೆ ಇದು ಅರ್ಹತಾ ಟೂರ್ನಿಯಾಗಲಿದೆ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಸಂಭವನೀಯರಿಗೆ ಸಿದ್ಧತಾ ಶಿಬಿರ ನಡೆದಿತ್ತು. ಧ್ರುವಿಲ್ ಪಟೇಲ್, ಕಾರ್ತಿಕ್‌ ಶರ್ಮಾ, ಸೋಹಮ್ ಮೋರೆ, ಅಕ್ಷಯ್‌ ಪ್ರಕಾಶ್‌ ಇಟ.ಪಿ. ಆದಿತ್ಯ ರಾಣಾ, ಕುಶ್‌ ಸಿಂಗ್‌, ಶುಭಮ್ ಯಾದವ್, ಆರ್ಯನ್ ಬಲಿಯಾನ್, ನಿಖಿಲ್, ಎಂ.ಕಬಿಲನ್, ಗೌರವ್ ಸಿಂಗ್‌ ಮತ್ತು ನವೀನ್ ಕುಮಾರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.