ಫಾರ್ಮುಲಾ 2: ಕುಶ್‌ಗೆ ಪ್ರಶಸ್ತಿ ಬುಡಾಪೆಸ್ಟ್‌: ಭಾರತದ ಯುವ ಚಾಲಕ ಕುಶ್ ಮೈನಿ ಅವರು ಹಂಗೇರಿಯನ್ ಗ್ರ್ಯಾನ್‌ಪ್ರೀ ರೇಸ್‌ನಲ್ಲಿ ತಮ್ಮ ವೃತ್ತಿಜೀವನದಲ್ಲೇ ಚೊಚ್ಚಲ ಫಾರ್ಮುಲಾ 2 ಸ್ಪ್ರಿಂಟ್ ರೇಸ್‌ ಕಿರೀಟವನ್ನು ಮುಡಿಗೇರಿಸಿಕೊಂಡರು. ನೆದರ್ಲೆಂಡ್ಸ್‌ನ ರಿಚರ್ಡ್ ವರ್ಸ್ಚೂರ್ ಅವರನ್ನು ಆರಂಭದಲ್ಲಿ ವಿಜೇತರೆಂದು ಘೋಷಿಸಲಾಗಿತ್ತು. ಆದರೆ, ತಾಂತ್ರಿಕ ಉಲ್ಲಂಘನೆಯ ಕಾರಣ ಅವರು ಅನರ್ಹಗೊಂಡಿದ್ದರಿಂದ ನಂತರದ ಸ್ಥಾನದಲ್ಲಿದ್ದ 23 ವರ್ಷದ ಕುಶ್‌ ಅವರಿಗೆ ಪ್ರಶಸ್ತಿ ಒಲಿಯಿತು. ಪ್ರಸಕ್ತ ಋತುವಿನಲ್ಲಿ ಕುಶ್ ಅವರು ಐದನೇ ಬಾರಿ ‘ಪೋಡಿಯಂ ಫಿನಿಷ್‌’ ಮಾಡಿದ್ದು, ಎಫ್‌2 ಗ್ರಿಡ್‌ನಲ್ಲಿರುವ ಭಾರತದ ಏಕೈಕ ಚಾಲಕ ಅವರಾಗಿದ್ದಾರೆ. ಈ ಪ್ರಶಸ್ತಿಯೊಂದಿಗೆ ಅವರು ಋತುವಿನ ಪಾಯಿಂಟ್ಸ್‌ಗೆ 10 ಅಂಕಗಳನ್ನು ಸೇರಿಸಿದರು. ‘ನನ್ನ ಮತ್ತು ತಂಡದ ಹೋರಾಟಕ್ಕೆ ದೊರೆತ ಪ್ರತಿಫಲ ಇದಾಗಿದೆ. ನನ್ನೊಂದಿಗೆ ಉತ್ತಮ ತಂಡ ಇರುವುದರಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಬೆಂಗಳೂರಿನ ಕುಶ್ ಮೈನಿ ಹೇಳಿದ್ದಾರೆ. ಭಾರತದ ಯುವ ಚಾಲಕ ಕುಶ್ ಮೈನಿ –ಎಕ್ಸ್‌ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.