: ಅಮೆರಿಕ ಬ್ಯಾಸ್ಕೆಟ್‌ಬಾಲ್‌ ತಂಡಗಳಿಗೆ ಚಿನ್ನ ಪ್ಯಾರಿಸ್‌: ಅಮೆರಿಕ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡವು ಫೈನಲ್‌ನಲ್ಲಿ 98–87ರಿಂದ ಆತಿಥೇಯ ಫ್ರಾನ್ಸ್‌ ತಂಡವನ್ನು ಮಣಿಸಿ, ಸತತ ಐದನೇ ಬಾರಿ ಒಲಿಂಪಿಕ್ಸ್‌ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದು ಪುರುಷರ ಬ್ಯಾಸ್ಕೆಟ್‌ಬಾಲ್‌ನಲ್ಲಿ ಅಮೆರಿಕಕ್ಕೆ 17ನೇ ಒಲಿಂಪಿಕ್‌ ಚಿನ್ನದ ಪದಕವಾಗಿದೆ. ಮಹಿಳೆಯರ ಬ್ಯಾಸ್ಕೆಟ್‌ಬಾಲ್‌ನಲ್ಲೂ ಅಮೆರಿಕ ಚಿನ್ನ ಗೆದ್ದುಕೊಂಡಿತು. ಈ ಮೂಲಕ ಸತತ ಎಂಟನೇ ಬಾರಿ ಚಾಂಪಿಯನ್‌ ಆಯಿತು. ಭಾನುವಾರ ನಡೆದ ಫೈನಲ್‌ನ ರೋಚಕ ಹಣಾಹಣಿಯಲ್ಲಿ 67–66ರಿಂದ ಫ್ರಾನ್ಸ್‌ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.