| ಮೊದಲ ಪದಕ ಗೆದ್ದ ಕಜಕಸ್ತಾನ ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭರ್ಜರಿ ಚಾಲನೆ ದೊರಕಿದ್ದು, ಕಜಕಸ್ತಾನ ಮೊದಲ ಪದಕ ಗೆದ್ದುಕೊಂಡಿದೆ. ಈಗಾಗಲೇ ಶೂಟಿಂಗ್ ಸ್ಪರ್ಧೆಗಳು ಆರಂಭಗೊಂಡಿವೆ. 10 ಮೀಟರ್ ಮಿಶ್ರ ಟೀಮ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕಜಕಸ್ತಾನದ ಅಲೆಕ್ಸಾಂಡ್ರಾ ಲೆ ಮತ್ತು ಇಸ್ಲಾಂ ಸತ್ಪಯೇವ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಜಕಸ್ತಾನದ ಜೋಡಿ ಜರ್ಮನಿಯ ಮ್ಯಾಕ್ಸಿಮಿಲಿಯನ್ ಉಲ್ಬ್ರಿಚ್ ಮತ್ತು ಅನ್ನಾ ಜಾನ್ಸೆನ್ ವಿರುದ್ದ 17-5ರ ಅಂತರದಿಂದ ಜಯ ಗಳಿಸಿತು. ಇದೇ ವಿಭಾಗದಲ್ಲಿ ಚೀನಾ ಹಾಗೂ ರಿಪಬ್ಲಿಕ್ ಆಫ್ ಕೊರಿಯಾ, ಚಿನ್ನದ ಪದಕಕ್ಕಾಗಿ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.