ಪ್ಯಾರಿಸ್ ಒಲಿಂಪಿಕ್ಸ್‌: ಅರ್ಹತಾ ಸುತ್ತಿನಲ್ಲಿ ಪ್ರಥ್ವಿರಾಜ್‌ಗೆ 21ನೇ ಸ್ಥಾನ ಶಾತೊಹು (ಫ್ರಾನ್ಸ್): ಭಾರತದ ಪೃಥ್ವಿರಾಜ್‌ ತೊಂಡೈಮಾನ್ ಅವರು ಪುರುಷರ ಟ್ರ್ಯಾಪ್‌ ಶೂಟಿಂಗ್‌ನ ಕೊನೆಯ ಎರಡು ಸುತ್ತುಗಳಲ್ಲಿ ‘ಪರಿಪೂರ್ಣ 25’ ಸ್ಕೋರ್ ಮಾಡಿದರೂ, ಕ್ವಾಲಿಫಿಕೇಷನ್‌ ಸುತ್ತಿನಲ್ಲಿ ಮಂಗಳವಾರ 21ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. 37 ವರ್ಷ ವಯಸ್ಸಿನ ತೊಂಡೈಮಾನ್ ಅವರು ಐದು ಸುತ್ತುಗಳ ಸ್ಪರ್ಧೆಯಲ್ಲಿ ಸಂಭನೀಯ 125 ಶಾಟ್‌ಗಳಲ್ಲಿ 118 ಸ್ಕೋರ್‌ ಮಾಡಿ 30 ಶೂಟರ್‌ಗಳ ಸ್ಪರ್ಧೆಯಲ್ಲಿ 21ನೇ ಸ್ಥಾನ ಪಡೆದರು. ಮೊದಲ ಆರು ಸ್ಥಾನ ಗಳಿಸಿದ ಸ್ಪರ್ಧಿಗಳು ಫೈನಲ್‌ಗೆ ಅರ್ಹತೆ ಪಡೆದರು. ಶಾತೊಹು ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಎರಡು ದಿನಗಳ ಅರ್ಹತಾ ಸ್ಪರ್ಧೆಯಲ್ಲಿ ತೊಂಡೈಮಾನ್ ಕ್ರಮವಾಗಿ 22, 25, 21, 25 ಮತ್ತು 25 ಸ್ಕೋರ್ ಮಾಡಿದರು. ಮೊದಲ ದಿನದ ಕೊನೆಗೆ ಅವರು 30ನೇ ಸ್ಥಾನ ಪಡೆದಿದ್ದರು. ಆದರೆ ಎರಡನೇ ದಿನ ಗಮನಾರ್ಹ ಪ್ರದರ್ಶನ ನೀಡಿ ಸ್ಥಾನ ಸುಧಾರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.