ಸ್ಪ್ರಿಂಟ್‌ನಲ್ಲಿ ಭೂಮಿಕಾ ಹ್ಯಾಟ್ರಿಕ್‌ ಸಾಧನೆ ಮೂಡುಬಿದಿರೆ (ದಕ್ಷಿಣ ಕನ್ನಡ): ಮೊದಲ ದಿನ ವೇಗದ ಓಟಗಾರ್ತಿಯಾಗಿ ಗಮನ ಸೆಳೆದ ಆಳ್ವಾಸ್‌ ಅಲೈಡ್ ಹೆಲ್ತ್ ಸೈನ್ಸಸ್‌ನ ಭೂಮಿಕಾ ಅವರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದ ಸ್ಪ್ರಿಂಟ್‌ನಲ್ಲಿ ಹ್ಯಾಟ್ರಿಕ್ ಚಿನ್ನದ ಸಾಧನೆ ಮಾಡಿದರು. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಕೂಟದ ಎರಡನೇ ದಿನವಾದ ಬುಧವಾರ ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಭೂಮಿಕಾ 4x400 ಮೀ ರಿಲೆಯಲ್ಲೂ ಆತಿಥೇಯರಿಗೆ ಚಿನ್ನ ತಂದುಕೊಟ್ಟರು. 200 ಮೀಟರ್ಸ್ ಓಟದಲ್ಲಿ ತಮ್ಮದೇ ಸಂಸ್ಥೆಯ ದುರ್ಗಾ ಅವರನ್ನು 2 ಸೆಕೆಂಡುಗಳ ಅಂತರದಲ್ಲಿ ಭೂಮಿಕಾ ಹಿಂದಿಕ್ಕಿದರು. ಈ ಸ್ಪರ್ಧೆಯ ಎಲ್ಲ ಪದಕಗಳು ಆಳ್ವಾಸ್ ಪಾಲಾದವು. ಪುರುಷ ಮತ್ತು ಮಹಿಳೆಯರ ರಿಲೆಯಲ್ಲೂ ಆಳ್ವಾಸ್ ಚಿನ್ನ ಗಳಿಸಿತು. ಎರಡನೇ ದಿನ 1 ಕೂಟ ದಾಖಲೆ ನಿರ್ಮಾಣವಾದರೆ, 2 ದಾಖಲೆಗಳು ಸಮ ಆದವು. ಪುರುಷರ 200 ಮೀ ಓಟದಲ್ಲಿ ಆ‌ಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್‌ನ ಶರಣ್ ಕೆ ಮತ್ತು ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಇದೇ ಸಂಸ್ಥೆಯ ದುರ್ಗಾ ಹಿಂದಿನ ದಾಖಲೆಯನ್ನು ಸಮಗೊಳಿಸಿದರು. ಪುರುಷರ 4x400 ಮೀಟರ್ಸ್‌ ರಿಲೆಯಲ್ಲಿ ಆಳ್ವಾಸ್‌ ದಾಖಲೆ ಬರೆಯಿತು. ಎರಡನೇ ದಿನದ ಫಲಿತಾಂಶಗಳು: ಪುರುಷರು: 200 ಮೀಟರ್ಸ್‌ ಓಟ: ಶರಣ್ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ)-1, ಕಾರ್ತಿಕ್ (ಆಳ್ವಾಸ್)-2, ಆಕಾಶ್ ಬೆನಡಿಕ್ಟ್ (ಶ್ರೀ ಗಂಗೋತ್ರಿ ಕಾಲೇಜ್, ಬೆಂಗಳೂರು)-3. ಕಾಲ: 22.09 ಸೆ (ದಾಖಲೆ ಸಮ: ಹಿಂದಿನ ದಾಖಲೆ: ಸುರೇಶ್ ಕುಮಾರ್, ಕೆವಿಜಿಡಿಸಿ ಸುಳ್ಯ, 1999); 800 ಮೀ: ಓಂಕಾರ್ ನಾಗೇಶ್ ಕೊಲ್ಕರ್ (ಶ್ರೀನಿವಾಸ ನರ್ಸಿಂಗ್ ಕಾಲೇಜು, ಮಂಗಳೂರು)-1, ಥಾಮಸ್ ಪೌಲ್ (ಸೇಂಟ್‌ ಆ್ಯನ್ಸ್ ನರ್ಸಿಂಗ್ ಕಾಲೇಜು, ಮೂಲ್ಕಿ)-2, ಪ್ರವೀಶ್ ಎಂ (ಆಳ್ವಾಸ್)-3. ಕಾಲ: 2ನಿ 13ಸೆ); ಲಾಂಗ್‌ ಜಂಪ್‌: ಸೂರ್ಯ ಪಿ (ಆಳ್ವಾಸ್)-1, ರಾಜೇಶ್ (ಮಂಡ್ಯ ವೈದ್ಯಕೀಯ ವಿಜ್ಞಾನ ಕಾಲೇಜು)-2, ಓಂಕಾರ್ ನಾಗೇಶ್‌ ಕೊಲ್ಕರ್ (ಶ್ರೀನಿವಾಸ ಫಾರ್ಮಸಿ ಕಾಲೇಜು, ಮಂಗಳೂರು)-3. ಅಂತರ: 6.6ಮೀ; ಹ್ಯಾಮರ್ ಥ್ರೋ: ತಮಿಳ್ ವಲ್ಲವನ್ (ಆಳ್ವಾಸ್ ಪ್ರಕೃತಿ ಚಿಕಿತ್ಸೆ, ಯೋಗವಿಜ್ಞಾನ ಕಾಲೇಜು, ಮೂಡುಬಿದಿರೆ)-1, ವಿಪಿನ್ ಥಾಮಸ್ (ಜುಲೇಕಾ ನರ್ಸಿಂಗ್ ಕಾಲೇಜು, ಮಂಗಳೂರು)-2, ಕೇಶವ ಕುಮಾರ್ ಎಲ್.ವಿ (ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಮೂಡುಬಿದಿರೆ)-3. ದೂರ: 22.11ಮೀ; 20,000 ಮೀ ವೇಗನಡಿಗೆ: ರಾಕೇಶ್ ಗಂಭೀರ್ ಕೆ.ಆರ್ (ಹೆರಿಟೇಜ್ ಸಿಟಿ ಕಾಲೇಜು, ಮೈಸೂರು)-1, ಶಿತಿಲ್ ಜೋಸೆಫ್ (ಫಾದರ್‌ ಮುಲ್ಲರ್ ಹೋಮಿಯೋಪಥಿ, ಮಂಗಳೂರು)-2, ಆಲ್ವಿನ್ ಜಾಬಿ (ಕಣಚೂರು ನರ್ಸಿಂಗ್ ಕಾಲೇಜು)-3. ಕಾಲ: 2 ತಾಸು 38.36ನಿ; 4x400 ಮೀಟರ್ ರಿಲೇ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು-1, ಆಳ್ವಾಸ್ ಹೋಮಿಯೋಪತಿ ಕಾಲೇಜು-2, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು, ಮಂಗಳೂರು-3. ಕಾಲ: 3ನಿ 27.2ಸೆ. (ಕೂಟ ದಾಖಲೆ: ಹಿಂದಿನ ದಾಖಲೆ: 3ನಿ 36 ಸೆ, ಆಳ್ವಾಸ್; 2020); 3000 ಮೀ ಸ್ಟೀಪಲ್‌ಚೇಸ್: ವರುಣ್ ರಾಥೋಡ್ (ಮಂಡ್ಯ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್)-1, ಮೌರ್ಯ ವೈ ಫುಲೆ (ಸೇಂಟ್‌ ಆ್ಯನ್ಸ್ ನರ್ಸಿಂಗ್ ಕಾಲೇಜು, ಮೂಲ್ಕಿ)-2, ಶೈಲೇಂದ್ರ ಎಸ್ (ಪ್ರಸನ್ನ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆ, ಬೆಳ್ತಂಗಡಿ)-3. ಕಾಲ: 13ನಿ 29ಸೆ; ಡಿಸ್ಕಸ್ ಥ್ರೋ: ರಾಕೇಶ್ (ಆಳ್ವಾಸ್)-1, ಮದನ್ ಜಿ.ಕೆ. (ಎಸ್‌.ಎಸ್ ಕಾಲೇಜು, ದಾವಣಗೆರೆ)-2, ರತನೇಶ್ ಆರ್. (ಶಾಂತಾ ಸಮೂಹ ಸಂಸ್ಥೆ, ನಂದನಗಾನಹಳ್ಳಿ)-3. ದೂರ: 32.43ಮೀ. ಮಹಿಳೆಯರು: 200 ಮೀಟರ್ಸ್‌ ಓಟ: ಭೂಮಿಕಾ (ಆಳ್ವಾಸ್)-1, ದುರ್ಗಾ (ಆಳ್ವಾಸ್)-2, ಲಕ್ಷ್ಮಿ ವೈಷ್ಣವಿ (ಆಳ್ವಾಸ್)-3. ಕಾಲ: 26.94 ಸೆ; 800 ಮೀ: ತ್ರಿಷಾ ಜೋಸೆಫ್ (ಡಾ.ಅಂಬೇಡ್ಕರ್ ನರ್ಸಿಂಗ್ ಕಾಲೇಜು, ಬೆಂಗಳೂರು)-1, ಸ್ನೇಹಾ ಎ.ಆರ್ (ರಾಜೀವ್ ಕಾಲೇಜು, ಹಾಸನ)-2, ಸಿಂಚನಾ ನಿಂಬಾಯಿ (ಕೆಎಲ್‍ಇ, ಹುಬ್ಬಳ್ಳಿ)-3. ಕಾಲ: 3ನಿ 17.8ಸೆ; 5000 ಮೀ ವೇಗನಡಿಗೆ: ಝೈನಾ ಕಾಮರೈನ್ (ಆಳ್ವಾಸ್)-1, ಆರ್ಯಾ ಎಸ್.ಕುಮಾರ್ (ಸದರ್ನ್ ಕಾಲೇಜ್ ಆಫ್ ನರ್ಸಿಂಗ್, ಬೆಂಗಳೂರು)-2, ಮೆರಿಲ್ (ಸೇಂಟ್‌ ಆ್ಯನ್ಸ್, ಮೂಲ್ಕಿ)-3. ಕಾಲ: 41ನಿ 25.4ಸೆ; 4x400 ಮೀ ರಿಲೇ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್-1, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು-2, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು-3. ಕಾಲ: 4ನಿ 42ಸೆ; ಲಾಂಗ್ ಜಂಪ್‌: ದುರ್ಗಾ (ಆಳ್ವಾಸ್)-1, ಲಕ್ಷ್ಮೀ ವೈಷ್ಣವಿ (ಆಳ್ವಾಸ್)-2, ಶೈಲಜಾ (ಆಳ್ವಾಸ್)-3. ಅಂತರ: 4.56ಮೀ (ದಾಖಲೆ ಸಮ: ಹಿಂದಿನ ದಾಖಲೆ: ಸೃಜನಾ ಕೆ, ಆಳ್ವಾಸ್ ಯೋಗ ವಿಜ್ಞಾನ ಕಾಲೇಜು, 2014); ಡಿಸ್ಕಸ್ ಥ್ರೋ: ಮೇಘನಾ ಜಿ (ಎಸ್‍ಡಿಎಂ, ಉಡುಪಿ)-1, ಹನಾ ಪಿ.ಎ (ಕೆಎಲ್‍ಇ, ಹುಬ್ಬಳ್ಳಿ)-2, ರಕ್ಷಿತಾ ಕೆ.ಎನ್. (ಶ್ರೀನಿವಾಸ ಕಾಲೇಜು, ಮಂಗಳೂರು)-3. ದೂರ: 28.55ಮೀ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.