| ಬಾಕ್ಸಿಂಗ್: ಭಾರತದ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ ಪ್ಯಾರಿಸ್‌: ಒಲಿಂಪಿಕ್‌ ಕ್ರೀಡಾಕೂಟದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಬಾಕ್ಸರ್ ಪ್ರೀತಿ ಪವಾರ್ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಪೈಪೋಟಿಯಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ಎದುರು ಪ್ರಾಬಲ್ಯ ಮೆರೆದ ಪ್ರೀತಿ, 5–0 ಅಂತರದ ಗೆಲುವು ಸಾಧಿಸಿದ್ದಾರೆ. ಏಷಿಯನ್‌ ಗೇಮ್ಸ್‌ ಕಂಚಿನ ಪದಕ ವಿಚೇತೆ ಪ್ರೀತಿ ಅವರಿಗೆ ಇದು ಚೊಚ್ಚಲ ಒಲಿಂಪಿಕ್ ಸ್ಪರ್ಧೆಯಾಗಿದೆ. ಹರಿಯಾಣದ 20 ವರ್ಷದ ಈ ಬಾಕ್ಸರ್‌, ಕ್ರೀಡಾಕೂಟಕ್ಕೆ ಕೆಲವು ದಿನಗಳ ಮೊದಲು ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಾಕ್ಸಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅಜಯ್‌ ಸಿಂಗ್‌ ಅವರು, 'ಜಯದೊಂದಿಗೆ ಅಭಿಯಾನ ಆರಂಭಿಸಿರುವುದು ಸಂತಸ ತಂದಿದೆ. ಕ್ರೀಡಾಕೂಟಕ್ಕೂ ಮುನ್ನ ಅನಾರೋಗ್ಯಕ್ಕೊಳಗಾಗಿದ್ದ ಪ್ರೀತಿ ಚೇತರಿಸಿಕೊಂಡಿದ್ದಷ್ಟೇ ಅಲ್ಲದೆ, ಹೋರಾಟ ನಡೆಸಿದರು ಮತ್ತು ಅಸಾಧಾರಣ ಧೈರ್ಯ ಪ್ರದರ್ಶಿಸಿದರು' ಎಂದಿದ್ದಾರೆ. ಪ್ರೀತಿ ಅವರು ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ. : : - (54kg) 5:0 . # #Paris2024 #Paris2024withIAS ../d8hyANE1tT ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.