ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ರಾಜ್ಯದಿಂದ 30 ಈಜುಪಟುಗಳು ಭಾಗಿ ಬೆಂಗಳೂರು: ಇದೇ ಭಾನುವಾರದಿಂದ ಜುಲೈ 5ರವರೆಗೆ ಹೈದರಾಬಾದ್‌ನ ಗಚಿಬೌಲಿ ಸ್ಟೇಡಿಯಂನಲ್ಲಿ ನಡೆಯಲಿರುವ 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ ಸ್ಪರ್ಧೆಗೆ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡವನ್ನು ಪ್ರಕಟಿಸಲಾಗಿದೆ. ಪುರುಷರ ತಂಡ: ಅನೀಶ್ ಎಸ್. ಗೌಡ, ಎಸ್‌. ಧನುಷ್, ಎಸ್‌. ದರ್ಶನ್, ಕಲ್ಪ್ ಎಸ್. ಬೋಹ್ರಾ, ಮಣಿಕಂಠ ಲಕ್ಷ್ಮಣ್, ಎಂ. ಪೃಥ್ವಿ, ಡಿ.ಎಸ್‌.ಪೃಥ್ವಿಕ್, ಶಿವಾಂಕ್ ವಿಶ್ವನಾಥ್, ಶೋನ್ ಗಂಗೂಲಿ, ಎಸ್‌. ಶಿವ, ತಾನಿಷ್‌ ಜಾರ್ಜ್ ಮ್ಯಾಥ್ಯೂ, ಉತ್ಕರ್ಷ್ ಎಸ್. ಪಾಟೀಲ, ಆರ್‌. ಸಂಭವ್, ವಿದಿತ್ ಎಸ್. ಶಂಕರ್. ಮಹಿಳೆಯರ ತಂಡ: ಅದಿತಿ ಎನ್. ಮುಲಾಯ್, ಅಶ್ಮಿತಾ ಚಂದ್ರ, ಧಿನಿಧಿ ದೇಸಿಂಗು, ಹಷಿಕಾ ರಾಮಚಂದ್ರ, ಲತೀಶಾ ಮಂದಣ್ಣ, ಎ.ಕೆ. ಲಿನೇಶಾ, ಮಾನವಿ ವರ್ಮ, ನೀನಾ ವೆಂಕಟೇಶ್, ರಿಧಿಮಾ ವೀರೇಂದ್ರ ಕುಮಾರ್, ಬಿ.ಎಂ. ರಿತಿಕಾ, ಎಸ್. ಲಕ್ಷ್ಯಾ, ಶಾಲಿನಿ ಆರ್. ದೀಕ್ಷಿತ್, ಶಿರಿನ್, ಸುಹಾಸಿನಿ ಘೋಷ್, ಸುವನಾ ಸಿ. ಭಾಸ್ಕರ್, ವಿಹಿತಾ ನಯನಾ. ಮ್ಯಾನೇಜರ್‌ ಎನ್‌.ರೋಹಿತ್‌ ಬಾಬು, ಕೋಚ್‌ಗಳಾದ ಎ.ಸಿ.ಜಯರಾಜನ್‌, ಜಾನ್‌ ಕ್ರಿಸ್ಟೋಪರ್‌, ಬಿ.ಎಂ. ಮಧುಕುಮಾರ್‌, ವಿ. ನಟರಾಜ್‌ ತಂಡದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.