ಚೆಸ್‌ ಲೀಗ್‌: ಫೈನಲ್‌ಗೇರಿದ ತ್ರಿವೇಣಿ ಕಾಂಟಿನೆಂಟಲ್ಸ್‌ ದುಬೈ: ತ್ರಿವೇಣಿ ಕಾಂಟಿನೆಂಟಲ್‌ ಕಿಂಗ್ಸ್‌ ತಂಡ 11–6 ರಿಂದ ವಿಶ್ವನಾಥನ್‌ ಆನಂದ್‌ ನಾಯಕತ್ವದ ಗಂಗಾಸ್‌ ಗ್ರ್ಯಾಂಡ್‌ಮಾಸ್ಟರ್ಸ್ ತಂಡವನ್ನು ಸೋಲಿಸಿ ಮೊದಲ ವಿಶ್ವ ಗ್ಲೋಬಲ್‌ ಚೆಸ್‌ ಲೀಗ್‌ನ ಫೈನಲ್‌ ತಲುಪಿದ ಮೊದಲ ತಂಡ ಎನಿಸಿತು. ಶನಿವಾರ ನಡೆದ ಇನ್ನೊಂದು ಪಂದ್ಯದಲ್ಲಿ ಚಿಂಗಾರಿ ಗಲ್ಫ್ ಟೈಟಾನ್ಸ್ ತಂಡ 8–7 ರಿಂದ ಎಸ್‌.ಜಿ.ಅಲ್ಪೈನ್ ವಾರಿಯರ್ಸ್‌ ಮೇಲೆ ಗೆಲುವು ದಾಖಲಿಸಿತು. ಕಾರ್ಲ್‌ಸನ್‌ ಅವರ ಅಲ್ಪೈನ್‌ ವಾರಿಯರ್ಸ್ ತಂಡ ಕೊನೆಯ ಮೂರು ಪಂದ್ಯಗಳಲ್ಲಿ ಸೋಲನುಭವಿದಂತಾಯಿತು. ತ್ರಿವೇಣಿ ತಂಡಕ್ಕೆ ಕಣದಲ್ಲಿ ಉಳಿಯಲು ಗೆಲುವು ಅನಿವಾರ್ಯವಾಗಿತ್ತು. ಇನ್ನೊಂದೆಡೆ ‘ಡ್ರಾ’ ಆದರೂ ಗಂಗಾಸ್‌ ತಂಡ ಫೈನಲ್‌ ತಲುಪುತಿತ್ತು. ಮೊದಲ ಪಂದ್ಯದಲ್ಲಿ ಲೆವೊನ್‌ ಅರೋನಿಯನ್, ಆನಂದ್ ಜೊತೆ ‘ಡ್ರಾ’ ಮಾಡಿಕೊಂಡಿದ್ದರು. ತ್ರಿವೇಣಿ ಒಟ್ಟು 18 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನಕ್ಕೇರಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.