ಎಲೊರ್ಡಾ ಬಾಕ್ಸಿಂಗ್ ಟೂರ್ನಿ: ಭಾರತಕ್ಕೆ ಒಟ್ಟು 5 ಪದಕ ಅಸ್ತಾನಾ: ಇಲ್ಲಿ ನಡೆಯುತ್ತಿರುವ ಎಲೊರ್ಡಾ ಕಪ್‌ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳು ಶನಿವಾರ ಎರಡು ಕಂಚು ಗೆಲ್ಲುವ ಮೂಲಕ ಹೋರಾಟವನ್ನು ಅಂತ್ಯಗೊಳಿಸಿದರು. ಈ ಮೂಲಕ ಟೂರ್ನಿಯಲ್ಲಿ ಭಾರತವು ಒಟ್ಟು 5 ಕಂಚಿನ ಪದಕ ಗೆದ್ದಿದೆ. ಶನಿವಾರ ನಡೆದ 60 ಕೆ.ಜಿ. ವಿಭಾಗದ ಸೆಮಿಫೈನಲ್‌ನ ಸ್ಪರ್ಧೆಯಲ್ಲಿ ಭಾರತದ ವಿಜಯಕುಮಾರ್ 1-4ರಿಂದ ಆತಿಥೇಯ ಕಜಕಸ್ತಾನದ ಬೆಕನೂರ್ ಒಝನೋವ್ ಎದುರು ಪರಾಭವಗೊಂಡು, ಕಂಚಿಗೆ ತೃಪ್ತಿಪಟ್ಟುಕೊಂಡರು. 81 ಕೆ.ಜಿ. ವಿಭಾಗದ ಸೆಮಿಫೈನಲ್‌ ಸ್ಪರ್ಧೆಯಲ್ಲಿ ಸುಷ್ಮಾ ಕಜಕಸ್ತಾನದ ಫರೀಜಾ ಶೋಲ್ಟೆ ವಿರುದ್ಧ 0-5ರಿಂದ ಪರಾಭವಗೊಂಡು, ಕಂಚಿನೊಂದಿಗೆ ಹೋರಾಟಕ್ಕೆ ತೆರೆ ಎಳೆದರು. ಇದಕ್ಕೂ ಮೊದಲು ಕೀಷಮ್ ಸಂಜಿತ್‌ ಸಿಂಗ್‌ (48 ಕೆಜಿ), ನೀಮಾ (63 ಕೆಜಿ) ಮತ್ತು ಸುಮಿತ್ (86 ಕೆಜಿ) ಕಂಚಿನ ಪದಕ ಗೆದ್ದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.