ಶೂಟಿಂಗ್‌: ಭಾರತಕ್ಕೆ ಬೆಳ್ಳಿ ನವದೆಹಲಿ (ಪಿಟಿಐ): ಭಾರತದ ಸಮೀರ್‌, ರಾಜ್‌ಕನ್ವರ್‌ ಸಿಂಗ್ ಸಂಧು ಮತ್ತು ಮಹೇಶ್‌ ಆನಂದ್‌ಕುಮಾರ್‌ ಅವರನ್ನೊಳಗೊಂಡ ತಂಡ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಜೂನಿಯರ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿತು. ಭಾರತ ತಂಡ ಒಟ್ಟು 1730 ಪಾಯಿಂಟ್ಸ್‌ ಕಲೆಹಾಕಿ, ಚೀನಾದ ಬಳಿಕ (1747) ಎರಡನೇ ಸ್ಥಾನ ಪಡೆದುಕೊಂಡಿತು. ಮಹೇಶ್‌ ಅವರು 25 ಮೀ. ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವೈಯಕ್ತಿಕ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸಿದರೂ, ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸಮೀರ್‌ ಏಳನೇ ಹಾಗೂ ರಾಜ್‌ಕನ್ವರ್‌ ಎಂಟನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.