ಬ್ಯಾಸ್ಕೆಟ್‌ಬಾಲ್‌: ಇಂದು ಫೈನಲ್‌ ಬೆಂಗಳೂರು: ಅಲ್‌ ಸ್ಟಾರ್‌ ಅಕಾಡೆಮಿ ಮೈಸೂರು ಮತ್ತು ಎಸ್‌. ಬ್ಲೂಸ್‌ ತಂಡಗಳು ಇಲ್ಲಿ ನಡೆಯುತ್ತಿರುವ 13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಫೈನಲ್‌ ಪ್ರವೇಶ ಮಾಡಿದವು. ಸೆಮಿಫೈನಲ್ ಲೀಗ್‌ನಲ್ಲಿ ಆಲ್‌ ಸ್ಟಾರ್‌ ಅಕಾಡೆಮಿ ಮೈಸೂರು ತಂಡವು ಅಪ್ಪಯ್ಯ ಬಿ.ಸಿ ತಂಡವನ್ನು 47–20ರಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಎಸ್‌. ಬ್ಲೂಸ್‌ ತಂಡವು ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವನ್ನು 42–27ರಿಂದ ಸೋಲಿಸಿತು. ಬಾಲಕರ ವಿಭಾಗದಲ್ಲಿ ಯಂಗ್‌ ಓರಿಯನ್ಸ್‌ ಎಸ್.ಸಿ ತಂಡವು ವಿಮಾನಪುರ ಎಸ್‌.ಸಿ ತಂಡವನ್ನು 51–32ರಿಂದ ಮತ್ತು ಎಂಸಿಎಚ್‌ಎಸ್ ತಂಡವು ಎಸ್‌.ಬ್ಲೂಸ್‌ ತಂಡವನ್ನು 80–49ರಿಂದ ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದವು. ಶನಿವಾರ ಮಧ್ಯಾಹ್ನ ಫೈನಲ್‌ ಸ್ಪರ್ಧೆಗಳು ನಡೆಯಲಿದ್ದು, ಬಾಲಕಿಯರ ವಿಭಾಗದಲ್ಲಿ ಆಲ್‌ ಸ್ಟಾರ್‌ ಅಕಾಡೆಮಿ ಮೈಸೂರು ತಂಡವು ಎಸ್‌.ಬ್ಲೂಸ್‌ ವಿರುದ್ಧ ಹಾಗೂ ಬಾಲಕರ ವಿಭಾಗದಲ್ಲಿ ಎಂಸಿಎಚ್ಎಸ್‌ ತಂಡವು ಯಂಗ್‌ ಓರಿಯನ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.