2023: ಭಾರತದ ಸಾತ್ವಿಕ್‌-ಚಿರಾಗ್ ಜೋಡಿ ಚಾಂಪಿಯನ್ ಯೋಸು (ಕೊರಿಯಾ): ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಕೊರಿಯಾ ಓಪನ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ಮೂರನೇ ಕ್ರಮಾಂಕದ ಸಾತ್ವಿಕ್‌-ಚಿರಾಗ್ ಜೋಡಿ ಭಾನುವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಫಜರ್ ಅಲ್ಫಿಯಾನ್‌ ಹಾಗೂ ಮುಹಮ್ಮದ್‌ ರಿಯಾಣ್‌ ಅರ್ಡಿಯಾಂಟೊ ವಿರುದ್ಧ 17-21 21-13 21-14 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಾತ್ವಿಕ್‌-ಚಿರಾಗ್ ಜೋಡಿ ಪ್ರಸಕ್ತ ಸಾಲಿನಲ್ಲಿ ನಾಲ್ಕನೇ ಬಾರಿಗೆ ಫೈನಲ್‌ಗೇರಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್, ಇಂಡೊನೇಷ್ಯಾ ಸೂಪರ್‌ 1000 ಮತ್ತು ಸ್ವಿಸ್‌ ಓಪನ್‌ ಸೂಪರ್‌ 500 ಸಿರೀಸ್‌ ಟೂರ್ನಿಯಲ್ಲೂ ಪ್ರಶಸ್ತಿ ಜಯಿಸಿದ್ದರು. 2022ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಜಯಿಸಿದ್ದರು. 🏸𝙃𝙖𝙩𝙩𝙧𝙞𝙘𝙠 𝙤𝙛 𝙑𝙞𝙘𝙩𝙤𝙧𝙞𝙚𝙨 𝙛𝙤𝙧 𝙎𝙖𝙩-𝘾𝙝𝙞! 👑 @ @Shettychirag04 #KoreaOpen2023!!💪 1⃣ 🇮🇳 … ../Pw6j9ATNOa 𝐂𝐇𝐀𝐌𝐏𝐈𝐎𝐍𝐒 🏆🤩 - 3️⃣ # 500 🥳 📸: @ @ | @sanjay091968 | @lakhaniarun1 #KoreaOpen2023## ../t0osXuHCFS ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.