ಹಾಕಿ: ಕಸ್ಟಮ್ಸ್‌ ತಂಡಕ್ಕೆ ಜಯ ಬೆಂಗಳೂರು: ಅದ್ವಿತ್‌ ನಾಚಪ್ಪ ಮತ್ತು ಎಸ್‌.ವಿ. ಸುನಿಲ್‌ ಗಳಿಸಿದ ತಲಾ 1 ಗೋಲಿನ ನೆರವಿನಿಂದ ಕಸ್ಟಮ್ಸ್‌ ಅಂಡ್‌ ಜಿಎಸ್‌ಟಿ ತಂಡವು 7ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಪೋಸ್ಟಲ್‌ ತಂಡವನ್ನು 2–1ರಿಂದ ಮಣಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಧರ್ 13ನೇ ನಿಮಿಷಕ್ಕೆ ಗೋಲು ದಾಖಲಿಸಿ ಪೋಸ್ಟಲ್‌ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಆದರೆ, 50ನೇ ನಿಮಿಷಕ್ಕೆ ಕಸ್ಟಮ್ಸ್‌ ತಂಡದ ಅದ್ವಿತ್‌ ಗೋಲು ದಾಖಲಿಸಿ ಸಮಬಲ ಸಾಧಿಸಿದರು. ಅದೇ ತಂಡದ ಸುನಿಲ್‌ 52ನೇ ನಿಮಿಷಕ್ಕೆ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಮತ್ತೊಂದು ಪಂದ್ಯದಲ್ಲಿ ಅಕೌಂಟೆಂಟ್‌ ಜನರಲ್‌ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌ ತಂಡವು ಸಾಯ್‌ ಎಸ್‌ಟಿಸಿ ತಂಡವನ್ನು 8–1ರಿಂದ ಮಣಿಸಿತು. ಅಕೌಂಟೆಂಟ್‌ ತಂಡದ ಜಯ್‌ ಪ್ರಕಾಶ್‌ (4 ನಿ), ನಿತಿನ್‌ ತಿಮ್ಮಯ್ಯ (25 ನಿ), ತ್ರಿಶೂಲ್‌ ಗಣಪತಿ (36, 40, 48 ನಿ), ಅಭರಣ ಸುದೇವ್ (38 ನಿ), ಮಹಮ್ಮದ್‌ ನಯೀಮ್‌ (43 ನಿ), ಸಚಿನ್ ಮಲ್ಲಾಡ್ (50 ನಿ) ಅವರು ಗೋಲು ಗಳಿಸಿದರು. ಸಾಯ್‌ ಎಸ್‌ಟಿಸಿ ತಂಡದ ಪರವಾಗಿ ಆಕರ್ಷ್ ಬಿದ್ದಪ್ಪ (38) ಏಕೈಕ ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.