ಬಿಎಫ್‌ಸಿ ಸೇರಿದ ಕಾರ್ನಿರೊ, ಶಂಕರ್‌ ಬೆಂಗಳೂರು: ಫುಲ್‌ಬ್ಯಾಕ್‌ ಆಟಗಾರ ಜೆಸೆಲ್ ಕಾರ್ನಿರೊ ಮತ್ತು ಮಿಡ್‌ಫೀಲ್ಡರ್‌ ಶಂಕರ್‌ ಸಂಪಂಗಿರಾಜ್‌ ಅವರು ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ಋತುವಿನಲ್ಲಿ ಕೇರಳ ಬ್ಲಾಸ್ಟರ್ಸ್‌ ಪರ ಆಡಿದ್ದ ಗೋವಾದ ಕಾರ್ನಿರೊ ಅವರು ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡರೆ, ಶಂಕರ್‌ ಅವರು ಒಂದು ವರ್ಷದ ಅವಧಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಡೆಂಪೊ ತಂಡದ ಪರ ವೃತ್ತಿಜೀವನ ಆರಂಭಿಸಿದ್ದ ಕಾರ್ನಿರೊ, ಆ ಬಳಿಕ ಪುಣೆ ಎಫ್‌ಸಿ ಮತ್ತು ಗೋವಾದ ಎಫ್‌ಸಿ ಬಾರ್ಡೆಜ್ ಪರ ಆಡಿದ್ದರು. 2019 ರಲ್ಲಿ ಅವರು ಕೇರಳ ಬ್ಲಾಸ್ಟರ್ಸ್‌ ಪರ ಒಪ್ಪಂದ ಮಾಡಿಕೊಂಡಿದ್ದರು. ಐಎಸ್‌ಎಲ್‌ನ ನಾಲ್ಕು ಋತುಗಳಲ್ಲಿ 63 ಪಂದ್ಯಗಳನ್ನು ಆಡಿದ್ದಾರೆ. ಬೆಂಗಳೂರಿನ ಆಟಗಾರ ಶಂಕರ್‌ ಅವರು ಈ ಹಿಂದೆ 2013 ರಿಂದ 2016ರ ವರೆಗೆ ಬಿಎಫ್‌ಸಿ ಪರ ಆಡಿದ್ದು, ಇದೀಗ ತಂಡಕ್ಕೆ ವಾಪಸಾಗಿದ್ದಾರೆ. 28 ವರ್ಷದ ಅವರು ಕೇರಳ ಬ್ಲಾಸ್ಟರ್ಸ್‌, ಎಟಿಕೆ, ಎಫ್‌ಸಿ ಪುಣೆ ಸಿಟಿ, ಹೈದರಾಬಾದ್‌ ಎಫ್‌ಸಿ ಹಾಗೂ ರೌಂಡ್‌ಗ್ಲಾಸ್‌ ಪಂಜಾಬ್‌ ಎಫ್‌ಸಿ ತಂಡಗಳ ಪರ ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.