ಏಷ್ಯನ್‌ ಬಾಕ್ಸಿಂಗ್: ಆಶಿಶ್‌ಗೆ ಪ್ರಶಸ್ತಿ ಬ್ಯಾಂಕಾಕ್‌ : ಭಾರತದ ಆಶಿಶ್ ಭಂಡೊರ್‌ ಅವರು ಏಷ್ಯನ್‌ ಬಾಕ್ಸಿಂಗ್‌ ಫೆಡರೇಷನ್‌ನ (ಎಬಿಎಫ್‌) ಕಾಂಟೆನೆಂಟಲ್‌ ಹೆವಿವೇಟ್‌ ಕಿರೀಟ ಮುಡಿಗೇರಿಸಿಕೊಂಡರು. ಗುರುವಾರ ನಡೆದ 10 ಸುತ್ತುಗಳ ಹಣಾಹಣಿಯಲ್ಲಿ ಆಶಿಶ್‌ 5–1 ಪಾಯಿಂಟ್ಸ್‌ಗಳಿಂದ ಎಕಫೊಬ್ ಅರೈವಾನ್‌ ಅವರನ್ನು ಮಣಿಸಿದರು. ಭಾರತದ ಬಾಕ್ಸರ್‌ 10 ಸುತ್ತುಗಳಲ್ಲಿ ಆರರಲ್ಲಿ ಮೇಲುಗೈ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.