ಹಾಕಿ: ಇಂಗ್ಲೆಂಡ್ ಎದುರು ಡ್ರಾ ಸಾಧಿಸಿದ ಭಾರತ ಬಾರ್ಸಿಲೋನಾ: ಸ್ಫೂರ್ತಿಯುತ ಆಟದ ಪ್ರದರ್ಶನ ನೀಡಿದ ಭಾರತ ತಂಡ, ಸ್ಪ್ಯಾನಿಷ್ ಹಾಕಿ ಫೆಡರೇಷನ್ ಶತಮಾನೋತ್ಸವ ಅಂತರರಾಷ್ಟ್ರೀಯ ಹಾಕಿ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ ಶುಕ್ರವಾರ ಇಂಗ್ಲೆಂಡ್‌ Sಎದುರು ಡ್ರಾ ಸಾಧಿಸಿತು. ಪಂದ್ಯದ ಐದನೇ ನಿಮಿಷ ಸ್ಯಾಮ್‌ ವಾರ್ಡ್‌, ಇಂಗ್ಲೆಂಡ್‌ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರೆ, ನಾಯಕ ಹರ್ಮನ್‌ಪ್ರೀತ್‌ ಸಿಂಗ್ 29ನೇ ನಿಮಿಷ ಗಳಿಸಿದ ಗೋಲಿನಿಂದ ಭಾರತ ಸಮಬಲ ಮಾಡಿಕೊಂಡಿತು. ಈ ‘ಡ್ರಾ’ದಿಂದಾಗಿ ಭಾನುವಾರ ನಡೆಯುವ ಫೈನಲ್‌ಗೆ ಸ್ಥಾನ ಪಡೆಯುವ ಭಾರತ ತಂಡದ ಕನಸು ಭಗ್ನಗೊಂಡಿತು. ಭಾರತ ತಂಡವು ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಸ್ಪೇನ್‌ ವಿರುದ್ಧ 1–2 ಗೋಲುಗಳಿಂದ ಸೋತಿತ್ತು. ಎರಡನೇ ಪಂದ್ಯದಲ್ಲಿ ನೆದರ್ಲೆಂಡ್‌ ವಿರುದ್ಧ 1–1ರಿಂದ ಡ್ರಾ ಸಾಧಿಸಿತ್ತು. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತವು ಗೆಲುವು ಸಾಧಿಸಿದಲ್ಲಿ ಭಾರತಕ್ಕೆ ಫೈನಲ್‌ ತಲುಪುವ ಅವಕಾಶವಿತ್ತು. ತಂಡವು ತನ್ನ ಮುಂದಿನ ಪಂದ್ಯವನ್ನು ಸ್ಥಾನ ನಿರ್ಧಾರಕ್ಕಾಗಿ ಆಡಲಿದೆ. ಇದರಲ್ಲಿ ಸ್ಪೇನ್‌– ನೆದರ್ಲೆಂಡ್ಸ್‌ ನಡುವಣ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.