200 ಮೀ. ಬ್ರೆಸ್ಟ್‌ಸ್ಟ್ರೋಕ್‌: ಕ್ವಿನ್‌ ವಿಶ್ವದಾಖಲೆ ಫುಕೊವೊಕಾ (ಜಪಾನ್‌): ಚೀನಾದ ಕ್ವಿನ್‌ ಹೈಯಾಂಗ್ ಅವರು ವಿಶ್ವ ಈಜು ಚಾಂಪಿಯನ್‌ಷಿಪ್‌ನ ಪುರುಷರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿಶ್ವದಾಖಲೆ ಸಹಿತ ಚಿನ್ನ ಗೆದ್ದರು. ಅವರು ಶುಕ್ರವಾರ ಈ ಸ್ಪರ್ಧೆಯನ್ನು 2ನಿ.05.48 ಸೆ.ಗಳಲ್ಲಿ ಪೂರೈಸಿದರು. ಕ್ವಿನ್‌ 2022ರಲ್ಲಿ ಆಸ್ಟ್ರೇಲಿಯಾದ ಝಾಕ್ ಸ್ಟಬ್ಲೆಟಿ ಕುಕ್‌ ಅಡಿಲೇಡ್‌ನಲ್ಲಿ ಸ್ಥಾಪಿಸಿದ (2ನಿ.05.95 ಸೆ.) ದಾಖಲೆಯನ್ನು ಮುಳುಗಿಸಿದರು. ಝಾಕ್‌ ಇಲ್ಲಿ 0.92 ಸೆ.ಗಳಿಂದ ಹಿಂದೆಬಿದ್ದು ಬೆಳ್ಳಿ ಪದಕ ಪಡೆದರು. ಅಮೆರಿಕದ ಮ್ಯಾಟ್‌ ಫಾಲೊನ್ ಕಂಚಿನ ಪದಕ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.