ವೇಟ್‌ಲಿಫ್ಟಿಂಗ್: ಭಾರತಕ್ಕೆ ಮತ್ತೊಂದು ಚಿನ್ನ ಗ್ರೇಟರ್‌ ನೊಯ್ಡಾ: ಭಾರತದ ವೇದವ್ರತ್ ಭಾರಲಿ ಸೋಮವಾರ ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 67 ಕೆ.ಜಿ ಪುರುಷರ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಭಾರಲಿ ಅವರು 273 ಕೆಜಿ (124+149 ಕೆಜಿ) ಭಾರವನ್ನು ಎತ್ತುವ ಮೂಲಕ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನವನ್ನು ಗೆದ್ದುಕೊಟ್ಟರು. ಉಜ್ಬೇಕಿಸ್ತಾನದ ನೂರಿಲ್ಲೊ ದಾವ್ಲಾಟೊವ್ (272 ಕೆಜಿ), ವಿಯೆಟ್ನಾಂನ ಎ. ಟಾನ್ (257 ಕೆಜಿ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.