ಟಿಟಿ: ರಕ್ಷಿತ್‌, ಅನರ್ಘ್ಯಾಗೆ ಪ್ರಶಸ್ತಿ ಬೆಂಗಳೂರು: ರಕ್ಷಿತ್‌ ಆರ್‌ ಬಾರಿಗಿಡದ ಮತ್ತು ಅನರ್ಘ್ಯಾ ಮಂಜುನಾಥ್ ಅವರು ಮಲ್ಲೇಶ್ವರದ ಕೆನರಾ ಯೂನಿಯನ್ ಆಶ್ರಯದಲ್ಲಿ ನಡೆದ ರಾಜ್ಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಟೂರ್ನಿಯ ಅಂತಿಮ ದಿನವಾದ ಸೋಮವಾರ ನಡೆದ ಪುರುಷರ ಫೈನಲ್‌ ಪಂದ್ಯದಲ್ಲಿ ರಕ್ಷಿತ್‌ ಅವರು ಶ್ರೇಯಲ್ ತೆಲಂಗ್‌ ಅವರನ್ನು 11–9, 11–3, 12–10, 11–4 ರಿಂದ ಮಣಿಸಿದರು. ಸೆಮಿಫೈನಲ್‌ನಲ್ಲಿ ರಕ್ಷಿತ್‌ ಅವರು ಅನಿರ್ಬನ್ ರಾಯ್‌ ಚೌಧರಿ ಅವರನ್ನು ಮತ್ತು ಶ್ರೇಯಲ್‌ ಅವರು ಕೆ.ಜೆ. ಆಕಾಶ್‌ ಅವರನ್ನು ಸೋಲಿಸಿದ್ದರು. ಮಹಿಳೆಯರ ಫೈನಲ್‌ ಪಂದ್ಯದಲ್ಲಿ ಅನರ್ಘ್ಯಾ ಮಂಜುನಾಥ್ ಅವರು ದೇಶ್ನಾ ಎಂ. ವಂಶಿಕಾ ಅವರನ್ನು 10–12, 11–8, 10–12, 9–11, 12–10, 13–11, 11–3 ರಿಂದ ಸೋಲಿಸಿದರು. ಅನರ್ಘ್ಯಾ ಅವರು ಸೆಮಿಫೈನಲ್‌ನಲ್ಲಿ ತೃಪ್ತಿ ಪುರೋಹಿತ್‌ ಅವರನ್ನು ಮತ್ತು ದೇಶ್ನಾ ಅವರು ವಿ. ಖುಷಿ ಅವರನ್ನು ಪರಾಭವಗೊಳಿಸಿದ್ದರು. 19 ವರ್ಷದೊಳಗಿನವರ ವಿಭಾಗ: ಬಾಲಕರ ಫೈನಲ್‌ ಪಂದ್ಯದಲ್ಲಿ ರೋಹಿತ್‌ ಶಂಕರ್‌ ಅವರು ಸಮ್ಯಕ್‌ ಕಶ್ಯಪ್‌ ಅವರನ್ನು 11–8, 13–11, 15–13, 13–11ರಿಂದ ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಸೆಮಿಫೈನಲ್‌ನಲ್ಲಿ ರೋಹಿತ್‌ ಅವರು ಕೆ. ಆಕಾಶ್‌ ಅವರನ್ನು ಮತ್ತು ಸಮ್ಯಕ್‌ ಅವರು ಪಿ.ವಿ. ಶ್ರೀಕಾಂತ್‌ ಕಶ್ಯಪ್‌ ಅವರನ್ನು ಸೋಲಿಸಿದ್ದರು. ಬಾಲಕಿಯರ ಫೈನಲ್‌ ಪಂದ್ಯದಲ್ಲಿ ದೇಶ್ನಾ ಎಂ. ವಂಶಿಕಾ ಅವರು ತೃಪ್ತಿ ಪುರೋಹಿತ್‌ ಅವರನ್ನು 11–9, 11–5, 11–3, 11–4ರಿಂದ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸೆಮಿಫೈನಲ್‌ನಲ್ಲಿ ದೇಶ್ನಾ ಅವರು ಸಹನಾ ಎಚ್‌. ಮೂರ್ತಿ ಅವರನ್ನು ಮತ್ತು ತೃಪ್ತಿ ಅವರು ಜಿ. ಕರುಣಾ ಅವರನ್ನು ಮಣಿಸಿದ್ದರು. 17 ವರ್ಷದೊಳಗಿನವರ ವಿಭಾಗ: ಬಾಲಕರ ಫೈನಲ್‌ ಪಂದ್ಯದಲ್ಲಿ ಅಭಿನವ್‌ ಕೆ. ಮೂರ್ತಿ ಅವರು ವಿ.ಜಿ. ವಿಭಾಸ್ ಅವರನ್ನು 7–11, 11–7, 11–9, 11–7ರಿಂದ ಮಣಿಸಿ ಪ್ರಶಸ್ತಿ ಗೆದ್ದರು. ಸೆಮಿಫೈನಲ್‌ನಲ್ಲಿ ಅಭಿನವ್‌ ಅವರು ಆರ್ಯ ಎ. ಜೈನ್‌ ಅವರನ್ನು ಮತ್ತು ವಿಭಾಸ್‌ ಅವರು ಬಿ.ಆರ್‌. ಗೌರವ್‌ ಅವರನ್ನು ಸೋಲಿಸಿದ್ದರು. ಬಾಲಕಿಯರ ಫೈನಲ್‌ ಪಂದ್ಯದಲ್ಲಿ ನೀತಿ ಅಗರವಾಲ್ ಅವರು ಹಿಮಾಂಶಿ ಚೌಧರಿ ಅವರನ್ನು 11- 5, 11- 6, 11-4ರಿಂದ ಮಣಿಸಿ ಚಾಂಪಿಯನ್‌ ಆದರು. ಸೆಮಿಫೈನಲ್‌ನಲ್ಲಿ ನೀತಿ ಅವರು ಪ್ರೇಕ್ಷಾ ಟಿ. ತಿಲಾವತ್ ಅವರನ್ನು ಮತ್ತು ಹಿಮಾಂಶಿ ಅವರು ಪ್ರಣವಿ ಅವರನ್ನು ಪರಾಭವಗೊಳಿಸಿದ್ದರು. ನಾನ್‌ ಮೆಡಲಿಸ್ಟ್‌ ಸಿಂಗಲ್ಸ್‌ (ಎನ್‌ಎಂಎಸ್‌) ವಿಭಾಗದಲ್ಲಿ ಎನ್‌. ಅರ್ಣವ್ ಅವರು ಅಭಿಷೇಕ್‌ ಹೊಸಮಠ್‌ ಅವರನ್ನು ಫೈನಲ್‌ನಲ್ಲಿ 11-7, 6-11, 11-9, 11-3ರಿಂದ ಮಣಿಸಿ ಪ್ರಶಸ್ತಿ ಗೆದ್ದರು. - ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.