ಉದ್ದೀಪನ ಮದ್ದು: ವುಶು ಸ್ಪರ್ಧಿ, ಈಜುಪಟು ಅಮಾನತು ನವದೆಹಲಿ (ಪಿಟಿಐ): ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಭಾರತದ ವುಶು ಸ್ಪರ್ಧಿ ಒವೈಸ್‌ ಸರವರ್‌ ಮತ್ತು ಜೂನಿಯರ್‌ ಈಜುಪಟುವೊಬ್ಬರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, ರಾಷ್ಟ್ರೀಯ ಉದ್ದೀಪನ ಮದ್ದು ತಡೆ (ನಾಡಾ) ಘಟಕವು ಇಬ್ಬರನ್ನೂ ತಾತ್ಕಾಲಿಕವಾಗಿ ಅಮಾನತು ಮಾಡಿದೆ. 23 ವರ್ಷದ ಒವೈಸ್‌ ಅವರು ಭಾರತ ವುಶು ಸಂಸ್ಥೆ, ಏಷ್ಯನ್‌ ಗೇಮ್ಸ್‌ಗೆ ಪ್ರಕಟಿಸಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದರು. ಲಡಾಖ್‌ನ ಅವರು 70 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಿತ್ತು. ಜೂನಿಯರ್‌ ಈಜುಪಟುವಿನ ಹೆಸರನ್ನು ನಾಡಾ ಬಹಿರಂಗಪಡಿಸಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.