ಏಷ್ಯನ್‌ ವೇಟ್‌ಲಿಫ್ಟಿಂಗ್‌: ಭಾರತಕ್ಕೆ 2 ಬೆಳ್ಳಿ ಗ್ರೇಟರ್‌ ನೊಯ್ಡಾ: ಭಾರತದ ಸೇನಾಪತಿ ಗುರು ನಾಯ್ಡು ಮತ್ತು ಎಂ.ಟಾಮ್ಚೌ ಮೀತಿ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 55 ಕೆ.ಜಿ. ವಿಭಾಗದಲ್ಲಿ ಶನಿವಾರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಈ ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ವಿಯೆಟ್ನಾಮಿನ ಕೆ.ದುವೊಂಗ್‌ ಚಿನ್ನ ಗೆದ್ದರು. 55 ಕೆ.ಜಿ. ಜೂನಿಯರ್‌ ವಿಭಾಗದಲ್ಲಿ ಮುಕುಂದ್‌ ಸಂತೋಷ್‌ ಅಹಿರ್ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ವಿಯೆಟ್ನಾಮಿನ ತು ಟುಂಗ್‌ ಡೊ ಮತ್ತು ಟುವಾನ್ ಕೀಟ್‌ ದುವೊಂಗ್‌ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗಳಿಸಿದರು. ಗೌತಮ ಬುದ್ಧ ವಿಶ್ವವಿದ್ಯಾಲಯದಲ್ಲಿ ಗುರುವಾರ ಆರಂಭವಾದ ಈ ಚಾಂಪಿಯನ್‌ಷಿಪ್‌ ಆಗಸ್ಟ್‌ 5ರವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.