ರಾಜ್ಯಮಟ್ಟದ ಚೆಸ್ ಟೂರ್ನಿ 6ಕ್ಕೆ ಮೈಸೂರು: ‘ನಗರದ ವಿಜಯನಗರದ ಸದ್ವಿದ್ಯಾ ಪಿ.ಯು ಕಾಲೇಜಿನಲ್ಲಿ ಆ.6ರಂದು ರಾಜ್ಯಮಟ್ಟದ, 19 ವರ್ಷದೊಳಗಿನವರ (ಮುಕ್ತ) ರ್‍ಯಾಪಿಡ್‌ ಚೆಸ್ ಟೂರ್ನಿ ಆಯೋಜಿಸಲಾಗಿದೆ’ ಎಂದು ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ. ನರಹರಿ ಬಾಬು ತಿಳಿಸಿದರು. ‘ಅದರೊಂದಿಗೆ, 7, 9, 11, 13 ಹಾಗೂ 15 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು ಪ್ರಶಸ್ತಿಗಳ ಮೊತ್ತ ₹30 ಸಾವಿರವಿದ್ದು, 73 ಟ್ರೋಫಿಗಳನ್ನು ನೀಡಲಾಗುವುದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಪಂದ್ಯವು 15 ನಿಮಿಷ 5 ಸೆಕೆಂಡುಗಳ ಅವಧಿಯ ರ‍್ಯಾಪಿಡ್‌ ಮಾದರಿಯದ್ದು. 5ರಿಂದ 7 ಸುತ್ತಿನಲ್ಲಿ ಸ್ಪರ್ಧೆಗಳು ಆಯೋಜನೆಯಾಗಲಿದ್ದು, ಎಫ್ಐಡಿಇ ನಿಯಮದಂತೆ ಫಲಿತಾಂಶ ನಿರ್ಧಾರವಾಗಲಿದೆ. ಆಟಗಾರರಿಗೆ ಪ್ರವೇಶ ಶುಲ್ಕವಿದೆ. ಮಾಹಿತಿಗೆ ಮತ್ತು ಹೆಸರು ನೋಂದಾಯಿಸಲು ಆ.4ರೊಳಗೆ 99640 58045 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.