ಬಜರಂಗ್‌ಗೆ ದೆಹಲಿ ನ್ಯಾಯಾಲಯದ ಸಮನ್ಸ್‌ ನವದೆಹಲಿ (ಪಿಟಿಐ): ಕ್ರಿಮಿನಲ್ ಮಾನಹಾನಿಕರ ಹೇಳಿಕೆ ದೂರಿಗೆ ಸಂಬಂಧಿಸಿ ಸೆ. 6ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ದೆಹಲಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಗುರುವಾರ ಸಮನ್ಸ್‌ ಜಾರಿಗೊಳಿಸಿದೆ. ಕುಸ್ತಿ ತರಬೇತುದಾರ ನರೇಶ್ ದಹಿಯಾ ಅವರು ಈ ದೂರು ನೀಡಿದ್ದರು. ಮೇ 10ರಂದು ಜಂತರ್‌ ಮಂಥರ್‌ನಲ್ಲಿ ನಡೆದ ಕುಸ್ತಿಪಟುಗಳ ಧರಣಿಯ ಸಂದರ್ಭದಲ್ಲಿ ಪೂನಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದರೆಂದು ದಹಿಯಾ ದೂರಿದ್ದರು. ದೂರಿಗೆ ಸಮರ್ಥನೆಯಾಗಿ ಸಲ್ಲಿಸಿರುವ ದಾಖಲೆಗಳ ಪ್ರಕಾರ, ಪತ್ರಿಕಾಗೋಷ್ಠಿಯಲ್ಲಿ ಬಜರಂಗ್ ಅವರು ದುರುದ್ದೇಶದಿಂದ ಆರೋಪ ಮಾಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಯಶದೀಪ್‌ ಚಾಹಲ್ ಅಭಿಪ್ರಾಯಪಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.