ಜಿಪಿಬಿಎಲ್‌: ಮಿಥುನ್‌ಗೆ ಗರಿಷ್ಠ ಮೌಲ್ಯ ಬೆಂಗಳೂರು: ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ಏಳನೇ ರ‍್ಯಾಂಕ್‌ ಆಟಗಾರ ಕೀನ್ ಯೆ ಲೊ ಅವರಿಗೆ ಆಘಾತ ನೀಡಿದ್ದ ಬೆಂಗಳೂರಿನ ಮಿಥುನ್ ಮಂಜುನಾಥ್ ಅವರು ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ (ಜಿಪಿಬಿಎಲ್‌) ಎರಡನೇ ಆವೃತ್ತಿಯ ಹರಾಜಿನಲ್ಲಿ ₹14.50 ಲಕ್ಷದೊಂದಿಗೆ ಗರಿಷ್ಠ ಮೌಲ್ಯ ಗಳಿಸಿದ್ದಾರೆ. 25 ವರ್ಷದ ಮಿಥುನ್‌ ಅವರಿಗೆ ಐಕಾನ್‌ ವಿಭಾಗದಲ್ಲಿ ಮೂಲ ಬೆಲೆ ₹8 ಲಕ್ಷ ನಿಗದಿಯಾಗಿತ್ತು. ಅವರಿಗಾಗಿ ಬೆಂಗಳೂರು ಟೈಗರ್ಸ್‌ ಮತ್ತು ಚೆನ್ನೈ ಸೂಪರ್ ಸ್ಟಾರ್ಜ್ ತಂಡಗಳು ಬಹಳಷ್ಟು ಪೈಪೋಟಿ ನಡೆಸಿದವು. ಅಂತಿಮವಾಗಿ ಚೆನ್ನೈ ತೆಕ್ಕೆಗೆ ಜಾರಿದರು. ಬೆಂಗಳೂರು ಟೈಗರ್ಸ್ ತಂಡವು ರಿಪಬ್ಲಿಕ್ ಆಫ್ ಕೊರಿಯಾದ ಶಿನ್ ಬೇಕ್ ಚಿಯೋಲ್ ಅವರನ್ನು ₹ 14 ಲಕ್ಷದೊಂದಿಗೆ ಖರೀದಿ ಮಾಡಿತು. ಇದು ಎರಡನೇ ಗರಿಷ್ಠ ಮೌಲ್ಯವಾಗಿದೆ. ಜಿಪಿಬಿಎಲ್‌ ಎರಡನೇ ಆವೃತ್ತಿಯ ಹರಾಜಿಗೆ 500ಕ್ಕೂ ಅಧಿಕ ಆಟಗಾರರು ನೋಂದಾಯಿಸಿದ್ದರು. ಅದರಿಂದ 150 ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಆ ಪೈಕಿ ಎಂಟು ತಂಡಗಳು ತಲಾ 10ರಂತೆ ಒಟ್ಟು 80 ಆಟಗಾರರನ್ನು ಹರಾಜಿನಲ್ಲಿ ಪಡೆದವು. ಪಂದ್ಯಗಳು ಆ.27ರಿಂದ ಸೆ.9ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ತಂಡಗಳು: ಬೆಂಗಳೂರು ಟೈಗರ್ಸ್: ಶಿನ್ ಬೇಕ್ ಚಿಯೋಲ್, ಪೂರ್ವ ಬಾರ್ವೆ, ಸಾಯಿ ಪ್ರತೀಕ್ ಕೃಷ್ಣಪ್ರಸಾದ್, ಲೀ ಡಾಂಗ್ ಕೆಯುನ್, ಹರ್ಷಿತ್ ಅಗರವಾಲ್‌, ಅಕ್ಷನ್ ಶೆಟ್ಟಿ, ಎಸ್‌. ಭಾರ್ಗವ್‌, ಅಶಿತ್‌ ಸೂರ್ಯ, ಪ್ರೇರಣಾ ಎನ್‌. ಶೇಟ್‌, ವಿ.ಎ. ಗ್ಲೋರಿಯಾ ಹೈದರಾಬಾದ್ ಹೌಂಡ್ಸ್: ಸಮೀರ್ ವರ್ಮಾ, ರಘು ಮರಿಸ್ವಾಮಿ, ಶಿಖಾ ಗೌತಮ್‌, ಎಸ್‌. ಪ್ರಕಾಶ್‌ ರಾಜ್‌, ತ್ರಿಶಾ ಹೆಗ್ಡೆ, ಎ. ಹರಿಹರನ್‌, ಕಾರ್ತಿಕಿ ಗುಲ್ಶನ್ ಕುಮಾರ್, ರುಬಾನ್‌ ಕುಮಾರ್, ಎಚ್‌.ಆರ್‌. ವಸಂತ್‌ ಕುಮಾರ್, ಅನಿಯಾ ಸೆಟಿಯನ್ ಪುಣೆ ಪ್ಯಾಂಥರ್ಸ್: ಜಾನ್ ಲೌಡಾ, ತಾನ್ಯಾ ಹೇಮಂತ್‌, ಹೇಮನಾಗೇಂದ್ರ, ಕನಿಕಾ ಕನ್ವಾಲ್, ಲೀ ಹಕ್ ಬೀಮ್, ಸಂಯಮ್ ಶುಕ್ಲಾ, ಅಭಿಷೇಕ್‌ ಶೈನಿ, ತರುಣ್ ಮನ್ನೆಪಲ್ಲಿ, ಚಯಾನಿತ್‌ ಜೋಶಿ, ಲಿಖಿತಾ ಶ್ರೀವಾಸ್ತವ ಚೆನ್ನೈ ಸೂಪರ್ ಸ್ಟಾರ್ಜ್: ಮಿಥುನ್‌ ಮಂಜುನಾಥ್‌, ಎಚ್‌.ವಿ. ನಿತಿನ್‌, ಧ್ರುತಿ ಯತೀಶ್‌, ಆಡಮ್‌ ಮಂಡ್ರೆಕ್‌, ವಿವಿಯನ್ ಸಂಡೋರ್ಹಾಜಿ, ಕೆ. ಸತೀಶ್‌ ಕುಮಾರ್‌, ವಿ.ಎಸ್‌. ವರ್ಷಿಣಿ, ಚಿರಾಗ್‌ ಸೇನ್‌, ರೋಷನ್‌ ಗುರ್ಬಾನಿ, ಲೋಕೇಶ್‌ ವಿಶ್ವನಾಥನ್‌ ಗುಜರಾತ್ ಲಯನ್ಸ್: ಕಿಮ್ ಗಿ ಜಂಗ್, ಗೌಸ್ ಶೇಕ್, ಜನನಿ ಅನಂತ್‌ ಕುಮಾರ್‌, ಸ್ಮಿತ್ ತೋಶಿವಾಲ್, ಸೌರಭ್‌ ವರ್ಮಾ, ಅರುಣ್‌ ಜಾರ್ಜ್‌, ಲೀ ಸಂಘೋ, ಆರ್ಯಮನ್‌ ಟಂಡನ್‌, ಪಾರ್ವತಿ ಎಸ್‌. ಕೃಷ್ಣನ್‌, ಬಿ.ಎಂ. ರಾಹುಲ್‌ ಕೇರಳ ಟಸ್ಕರ್ಸ್: ಜೂಲಿಯನ್ ಕ್ಯಾರಗಿ, ಪೃಥ್ವಿ ಕೆ. ರಾಯ್‌, ಕಿಮ್ ಹ್ವಿ ತೇ, ಮನು ಅತ್ರಿ, ರುಜುಲಾ ರಾಮು, ಅಶ್ವಿನಿ ಭಟ್‌, ಶ್ರುತಿ ಮುಂಡದ, ವೈಭವ್‌ ರವಿ, ಹರ್ಷಿಲ್ ದಾನಿ, ಸಿದ್ದಾರ್ಥ್‌ ಎಲಂಗೋ ಮುಂಬೈ ವೋಲ್ವ್ಸ್: ಪೋಲಿನಾ ಬುಹ್ರೋವಾ, ಬಿ. ಸುಮೀತ್‌ ರೆಡ್ಡಿ, ಕಿಮ್ ಡುಕ್ ಯಂಗ್, ವಿಷ್ಣುವರ್ಧನ್‌, ಆದ್ಯಾ ವರಿಯಾತ್, ಹೇಮಂತ್‌ ಎಂ. ಗೌಡ, ಆದಿತ್ಯ ಜೋಶಿ, ಸೂರಜ್‌ ಗೋಲಾ, ರುದ್ರ ಶಾಹಿ, ಪಿ. ಅಮೃತಾ ನಾರ್ತ್‌ಈಸ್ಟ್ ರೈನೋಸ್: ಸಾಯಿ ಪ್ರಣೀತ್‌, ಕೃಷ್ಣಪ್ರಸಾದ್‌ ಗರಗ, ಫ್ರಾನ್ಜಿಸ್ಕಾ ವೋಕ್ಮನ್, ಒಂಡ್ರೆಜ್ ಕ್ರಾಲ್, ಎಸ್‌.ಡಿ. ಸನೀತ್‌, ನೆಯ್ಸ ಕಾರ್ಯಪ್ಪ, ಮಂಜಿತ್‌ ಸಿಂಗ್‌, ಡಿಂಕು ಸಿಂಗ್‌, ಜೇಡೆ ಅನಿಲ್‌, ಚಿರಂಜೀವಿ ರೆಡ್ಡಿ - - = ಪ್ರಜಾವಾಣಿ ವಾರ್ತೆ ಬೆಂಗಳೂರು: ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಆಟಗಾರರಿಗೆ ಹೆಚ್ಚು ಹಣ ದೊರೆಯುವಂತಾಗಲು ಬಿಡ್ ಪ್ರಕ್ರಿಯೆಯಲ್ಲಿ ಎರಡು ಹೊಸ ನಿಯಮ ಜಾರಿಗೊಳಿಸಲಾಗಿದೆ. ಮೊದಲನೇಯದಾಗಿ; ಹೋದ ವರ್ಷ ನಡೆದಿದ್ದ ಮೊದಲ ಆವೃತ್ತಿಗಿಂತಲೂ ತಂಡಗಳ ಪರ್ಸ್‌ ಮೊತ್ತವನ್ನು ₹ 12 ಲಕ್ಷದಿಂದ 35 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎರಡನೇಯದಾಗಿ; ಬಿಡ್‌ ಪ್ರಕ್ರಿಯೆಯಲ್ಲಿ ನೋಂದಾಯಿತರಾಗಿರುವ 150 ಆಟಗಾರರಿಗೂ ತಲಾ ₹ 25 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಶನಿವಾರ ನಡೆದ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಜಿಪಿಬಿಎಲ್ ಕಮಿಷನರ್ ಮತ್ತು ಬಿಟ್‌ಸ್ಪೋರ್ಟ್ಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ‍್ರಶಾಂತ್ ರೆಡ್ಡಿ ಈ ವಿಷಯ ತಿಳಿಸಿದರು. ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರು ಟ್ರೋಫಿಯನ್ನು ಅನಾವರಣಗೊಳಿಸಿ ಆಟಗಾರರು ಮತ್ತು ಆಯೋಜಕರಿಗೆ ಶುಭ ಹಾರೈಸಿದರು. ‘ಹೋದ ವರ್ಷ ಉತ್ತಮ ಸ್ಪಂದನೆ ಗಳಿಸಿದ್ದ ಟೂರ್ನಿಯನ್ನು ಈ ಬಾರಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದೇವೆ. ಅದಕ್ಕಾಗಿ ಯುವ ಆಟಗಾರರ ಉತ್ತೇಜನಕ್ಕಾಗಿ ಬಿಡ್ ಪ್ರಕ್ರಿಯೆಯಲ್ಲಿರುವ ಎಲ್ಲ ಆಟಗಾರರಿಗೂ ಕನಿಷ್ಠ ಮೊತ್ತದ ಪ್ರೋತ್ಸಾಹಧನ ನಿಗದಿಗೊಳಿಸಲಾಗಿದೆ. ಇದರಲ್ಲಿ 30 ಮಂದಿ ಅಂತರರಾಷ್ಟ್ರೀಯ ಆಟಗಾರರೂ ಇದ್ದಾರೆ ಇಂತಹ ಯೋಜನೆ ತಂದಿರುವ ದೇಶದ ಮೊದಲ ಲೀಗ್ ಇದಾಗಿರುವುದು ಹೆಮ್ಮೆಯ ವಿಷಯ‘ ಎಂದು ಪ್ರಶಾಂತ್ ರೆಡ್ಡಿ ತಿಳಿಸಿದರು. ಆಯೋಜಕರು ಪ್ರಶಸ್ತಿ ಮೊತ್ತವನ್ನು ₹ 1 ಕೋಟಿಯಿಂದ ₹ 60 ಲಕ್ಷಕ್ಕೆ ಕಡಿತಗೊಳಿಸಿ ತಂಡಗಳ ಪರ್ಸ್‌ ಮೊತ್ತವನ್ನು ಹೆಚ್ಚಿಸಲು ಅವಕಾಶ ನೀಡಲಾಗಿದೆ. ಪ್ರತಿ ತಂಡದ ಪರ್ಸ್‌ ಮೊತ್ತವು ಹೋದ ವರ್ಷಕ್ಕಿಂತ ₹ 23 ಲಕ್ಷಗಳ ಏರಿಕೆ ಕಂಡಿವೆ. ಬೆಂಗಳೂರು ದೆಹಲಿ ಚೆನ್ನೈ ಹೈದರಾಬಾದ್ ಲಖನೌ ಪುಣೆ ನಾರ್ತ್‌ ಈಸ್ಟ್ ಮುಂಬೈ ರಾಯಪುರ ಮತ್ತು ಕೊಚ್ಚಿ ತಂಡಗಳು ಕಣಕ್ಕಿಳಿಯಲಿವೆ. ಮೊದಲ ಆವೃತ್ತಿಯಲ್ಲಿ ಒಲಿಂಪಿಯನ್ ಆಟಗಾರರಾದ ಪಿ.ವಿ. ಸಿಂಧು ಕೆ.ಶ್ರೀಕಾಂತ್ ಅಶ್ವಿನಿ ಪೊನ್ನಪ್ಪ ಸಾಯಿಪ್ರಣೀತ್ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಚಿರಾಗ್ ಶೆಟ್ಟಿ ಎಚ್‌.ಎಸ್. ಪ್ರಣಯ್ ಮತ್ತು ಜ್ವಾಲಾ ಗುಟ್ಟಾ ತಂಡಗಳ ಐಕಾನ್ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.