ಡುರಾಂಡ್‌ ಕಪ್‌: ಡ್ರಾ ಪಂದ್ಯದಲ್ಲಿ ದೆಹಲಿ ಗುವಾಹಟಿ: ದೆಹಲಿ ಎಫ್‌ಸಿ ತಂಡವು ಭಾನುವಾರ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡದೊಂದಿಗೆ 1–1ರಿಂದ ಡ್ರಾ ಸಾಧಿಸಿತು. ಹಿಮಾಂಶು ಜಾಂಗ್ರಾ ಅವರು 6ನೇ ನಿಮಿಷಕ್ಕೆ ಗೋಲು ಹೊಡೆಯುವ ಮೂಲಕ ದೆಹಲಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಹೈದರಾಬಾದ್‌ ತಂಡದ ರಾಮಹ್ಲುಂಚುಂಗ 57ನೇ ನಿಮಿಷಕ್ಕೆ ಚೆಂಡನ್ನು ಗುರಿ ತಲುಪಿಸುವ ಮೂಲಕ ಸಮಬಲ ತಂದುಕೊಟ್ಟರು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಎರಡೂ ತಂಡಗಳು ಆಟವಾಡಲು ಪ್ರಯಾಸಪಟ್ಟರು. ಮತ್ತೊಂದು ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು ಬಾಂಗ್ಲಾದೇಶ ಆರ್ಮಿ ಫುಟ್‌ಬಾಲ್‌ ತಂಡದೊಂದಿಗೆ 2–2ರಿಂದ ಡ್ರಾ ಸಾಧಿಸಿತು. ಬೆಂಗಾಲ್ ತಂಡದ ಪರವಾಗಿ ಸಾಲ್ ಕ್ರೆಸ್ಪೋ (34ನೇ ನಿ.), ಮತ್ತು ಸಿವಿರೋ (45+4ನೇ) ಗೋಲು ದಾಖಲಿಸಿದರೆ, ಬಾಂಗ್ಲಾ ತಂಡದ ಪರವಾಗಿ ಸಹರಿಯಾರ್ ಎಮನ್ (88ನೇ) ಮತ್ತು ಮೆರಾಜ್ ಪ್ರಧಾನ್ (90+7ನೇ) ಚೆಂಡನ್ನು ಗುರಿ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.