ಹವ್ಯಕ ಬ್ಯಾಡ್ಮಿಂಟನ್ ಟೂರ್ನಿ: ಗುರುರಾಜ್, ಸಂಪೂರ್ಣಾ ಭಟ್‌ಗೆ ಪ್ರಶಸ್ತಿ ಬೆಂಗಳೂರು: ಗುರುರಾಜ್ ಮತ್ತು ಸಂಪೂರ್ಣಾ ಭಟ್ ಅವರು ಅಂಜನಾಪುರದ ಸಿಲಿಕಾನ್ ಸಿಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭಾನುವಾರ ಮುಕ್ತಾಯಗೊಂಡ 2023ನೇ ಸಾಲಿನ 7ನೇ ಹವ್ಯಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಮುಕ್ತ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಫಲಿತಾಂಶ: ಪುರುಷರ ವಿಭಾಗ: ಸಿಂಗಲ್ಸ್‌: ಗುರುರಾಜ್‌– 1, ಅಖಿಲ್‌ ಹೆಗಡೆ– 2; 16 ವರ್ಷದೊಳಗಿನವರ ಸಿಂಗಲ್ಸ್: ಶ್ರೀಶ ಯು. ಹೊಸಮನೆ–1, ಕ್ಷಿತಿಜ ಭಟ್–2; ಸಿಂಗಲ್ಸ್ (35+): ಅಶ್ವಿನ್ ಕುಮಾರ್ ಭಟ್–1, ಸುಶರ್ಮ ಕೆ.ಎಸ್–2; ಸಿಂಗಲ್ಸ್ (50+): ಗಂಗಾಧರ ಸಿ. ಹೆಗಡೆ–1, ಮೋಹನ್ ಶ್ರೀನಿವಾಸ ಸಾಯಾ–2; ಸಿಂಗಲ್ಸ್ (60+): ಡಾ.ಸುಬ್ಬರಾವ್–1, ರಾಘವೇಂದ್ರ ಎಂ.ಎಸ್–2 ಮುಕ್ತ ಡಬಲ್ಸ್: ಮುರಳಿ ಹೆಗಡೆ ಮತ್ತು ಅಖಿಲ್ ಹೆಗಡೆ–1, ನಿರಂಜನ್ ಹೆಗಡೆ ಮತ್ತು ಪ್ರವೀಣ್ ಹೆಗಡೆ–2; ಡಬಲ್ಸ್ (35+): ಅಶ್ವಿನ್ ಕುಮಾರ್ ಭಟ್ ಮತ್ತು ಭೂಷಣ್ ಅಮಚಿ–1, ಸಂದೇಶ್ ಕುಮಾರ್ ಎಚ್.ಕೆ ಮತ್ತು ಮನೋಜ್ ಶಿಲಗೆರಮನೆ–2; ಡಬಲ್ಸ್ (50+): ಕೃಷ್ಣಮೂರ್ತಿ ಎಸ್.ಪಿ. ಮತ್ತು ವಿನೀತ್ ಭಟ್–1, ಡಾ.ದಿನೇಶ್ ಹೆಗಡೆ ಮತ್ತು ಡಾ. ರಮೇಶ್–2 ಹೆಗಡೆ; ಡಬಲ್ಸ್ (60+): ರಾಘವೇಂದ್ರ ಎಂ.ಎಸ್. ಮತ್ತು ಹಿರಣ್ಯ ಭಟ್–1, ಸುಬ್ಬಪ್ಪಯ್ಯ ವೈದ್ಯ ಮತ್ತು ಸುಬ್ಬರಾವ್–2; ಮಿಶ್ರ ವಯಸ್ಸಿನ ಡಬಲ್ಸ್: ಪ್ರದೀಪ್ ಮತ್ತು ಕಿರಣ್ ಜಯಮೂರ್ತಿ ಭಟ್–1, ಗುರುರಾಜ್ ಎನ್. ಹೆಗಡೆ ಮತ್ತು ಡಾ.ದಿನೇಶ್ ಹೆಗಡೆ–2 ಮಹಿಳೆಯರ ವಿಭಾಗ: ಮುಕ್ತ ಸಿಂಗಲ್ಸ್: ಸಂಪೂರ್ಣ ಭಟ್–1, ಸುಪ್ರಿಯಾ ಜಾನಾ–2;ಬಾಲಕಿಯರ ಸಿಂಗಲ್ಸ್ (16 ವರ್ಷದೊಳಗೆ): ಪ್ರಾಂಜಲಾ ನಿಸರ್ಗ–1, ವೈಭವ ಕೆ.ಆರ್–2 ಮುಕ್ತ ಡಬಲ್ಸ್: ಸಂಪೂರ್ಣಾ ಭಟ್ ಮತ್ತು ಸಾಧನಾ ಭಟ್–1, ಶಾಂತಾ ಹೆಗಡೆ ಮತ್ತು ಸುಗಂಧಿ–2; ಡಬಲ್ಸ್ (30+): ರಶ್ಮಿ ಭಟ್ ಮತ್ತು ಸೌಮ್ಯ– 1, ಅಕ್ಷತಾ ಎಂ.ಕೆ. ಮತ್ತು ಮುಧುಮತಿ–2 ಸಿಂಗಲ್ಸ್‌ (35+): ಸ್ಮಿತಾ ನಟರಾಜ್– 1, ಅಕ್ಷತಾ ಎಂ.ಕೆ–2. ‌ಮಿಶ್ರ ಮುಕ್ತ ಡಬಲ್ಸ್: ಸಾತ್ವಿಕ್ ಭಟ್ ಮತ್ತು ವರ್ಷಾ ಭಟ್‌–1, ಸಂಪೂರ್ಣಾ ಭಟ್ ಮತ್ತು ಅಖಿಲ್ ಹೆಗಡೆ–2; 16 ವರ್ಷದೊಳಗಿನ ಮಿಶ್ರ ಡಬಲ್ಸ್: ಕ್ಷಿತಿಜ್ ಭಟ್ ಮತ್ತು ಪ್ರಾಂಜಲಾ ನಿಸರ್ಗ–1, ತೃಶಾ ಎಂ. ಹೆಗಡೆ ಮತ್ತು ದಿಗಂತ್ ಎಸ್. ಹೆಗಡೆ–2; ಮಿಶ್ರ ಡಬಲ್ಸ್ (40+): ವಿನೀತ್ ಭಟ್ ಮತ್ತು ವರ್ಷ ಭಟ್–1, ಅರ್ಪಣಾ ಹೆಗಡೆ ಮತ್ತು ಅಖಿಲ್ ಹೆಗಡೆ–2 ಬಹುಮಾನ ವಿತರಣೆ: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನವ ಹಕ್ಕುಗಳ ಆಯೋಗದ ಆಯುಕ್ತ ಸುಧೀರ್ ಹೆಗಡೆ ಮಾತನಾಡಿದರು. ರೀಪೋಸ್ ಮ್ಯಾಟ್ರೆಸ್‌ನ ಸಿಒಒ ರಾಮನಾಥ್ ಭಟ್, ಹಿರಿಯ ಆಟಗಾರ ವಿಶ್ವನಾಥ ಹೆಗಡೆ ಇದ್ದರು. ಜಗದೀಶ್ ಹೊಸಬಾಳೆ ಸ್ವಾಗತಿಸಿದರು. ಕಮಲಾಕರ ಕೆ.ಎಸ್. ವಂದಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.