ಕುಸ್ತಿ: ಫೈನಲ್‌ಗೆ ಅಂತಿಮ್‌ ಪಂಘಲ್ ಅಮ್ಮಾನ್‌, ಜೋರ್ಡನ್ (ಪಿಟಿಐ): ಭಾರತದ ಅಂತಿಮ್‌ ಪಂಘಲ್‌ ಸೇರಿದಂತೆ ನಾಲ್ವರು ಮಹಿಳಾ ಕುಸ್ತಿಪಟುಗಳು ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ 53 ಕೆ.ಜಿ. ವಿಭಾಗದ ಮೂರು ಬೌಟ್‌ಗಳನ್ನೂ ಅಂತಿಮ್‌ ಗೆದ್ದುಕೊಂಡರು. ಅವರು ಈ ಹಾದಿಯಲ್ಲಿ ಕೇವಲ ಎರಡು ಪಾಯಿಂಟ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಸವಿತಾ (62 ಕೆ.ಜಿ.), ಅಂತಿಮ್‌ ಕುಂಡೂ (65 ಕೆ.ಜಿ) ಮತ್ತು ಪ್ರಿಯಾ (76 ಕೆ.ಜಿ.) ಅವರೂ ಫೈನಲ್‌ ತಲುಪಿ ಚಿನ್ನ ಅಥವಾ ಬೆಳ್ಳಿಯ ಪದಕ ಖಚಿತಪಡಿಸಿಕೊಂಡರು. ಹರ್ಷಿತಾ ಅವರು 72 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.