ಬ್ಯಾಸ್ಕೆಟ್‌ಬಾಲ್‌: ಮಂಗಳೂರು ತಂಡಕ್ಕೆ ಜಯ ಬೆಂಗಳೂರು: ರಜತ್‌ ಮತ್ತು ಪ್ರದ್ಯುಮ್ನ ಅವರ ಆಟದ ಬಲದಿಂದ ಮಂಗಳೂರು ಬಿ.ಸಿ ತಂಡವು ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 71–70ರಿಂದ ಜಿಎಸ್‌ಟಿ ಅಂಡ್‌ ಕಸ್ಟಮ್ಸ್‌ ತಂಡವನ್ನು ಮಣಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡವು 1 ಪಾಯಿಂಟ್‌ನಿಂದ ಗೆಲುವು ಸಾಧಿಸಿತು. ಆ ತಂಡದ ರಜತ್‌ (23), ಪ್ರದ್ಯುಮ್ನ (16) ಮಿಂಚಿದರು. ಜಿಎಸ್‌ಟಿ ತಂಡದ ಹೃಷಿಕೇಶ್‌ (17), ಆತೇಶ್ (16) ಗಮನ ಸೆಳೆದರು. ಮತ್ತೊಂದು ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ ತಂಡವು 69–65ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ಬಿ.ಸಿ ತಂಡವನ್ನು ಸೋಲಿಸಿತು. ಸೂರಜ್‌ (27), ಹರೀಶ್‌ (16) ಬಿಎಸ್‌ಎನ್‌ಎಲ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎಂಎನ್‌ಕೆ ತಂಡದ ದರ್ಶನ್‌ 19, ಡೆನಿಯಲ್‌ (14) ಗಮನ ಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.