ಕುಸ್ತಿ: ಅಂತಿಮ್‌ ಪಂಘಲ್‌ ಐತಿಹಾಸಿಕ ಸಾಧನೆ ಅಮ್ಮಾನ್, ಜೋರ್ಡನ್: ಅಂತಿಮ್‌ ಪಂಘಲ್‌ ಅವರು ಜೂನಿಯರ್‌ (20 ವರ್ಷದೊಳಗಿನವರ) ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಬಾರಿ ಚಿನ್ನ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಐತಿಹಾಸಿಕ ಸಾಧನೆ ತಮ್ಮದಾಗಿಸಿಕೊಂಡರು. ಶುಕ್ರವಾರ ಇಲ್ಲಿ ನಡೆದ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಉಕ್ರೇನ್‌ನ ಮರಿಯಾ ಯೆಫ್ರೆಮೋವಾ ವಿರುದ್ಧ 4–0 ರಲ್ಲಿ ಗೆದ್ದು ಚಾಂಪಿಯನ್‌ ಆದರು. ಕಳೆದ ವರ್ಷ ನಡೆದಿದ್ದ ಕೂಟದಲ್ಲೂ ಅವರು ಇದೇ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಪಂಘಲ್‌ ಅವರು ಈ ಕೂಟದಲ್ಲಿ ಕೇವಲ ಎರಡು ಪಾಯಿಂಟ್ಸ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟಿದ್ದಾರೆ. ರೀನಾಗೆ ಕಂಚು: ರೀನಾ ಅವರು 57 ಕೆ.ಜಿ. ವಿಭಾಗದಲ್ಲಿ 9–4 ರಿಂದ ಕಜಕಸ್ತಾನದ ಶುಗಿಲಾ ಒಮಿರ್‌ಬೆಕ್‌ ವಿರುದ್ಧ ಗೆದ್ದು ಕಂಚು ತಮ್ಮದಾಗಿಸಿಕೊಂಡರು. ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ಐದು ಮಂದಿ ‍ಪೈಲ್ವಾನರಿಗೆ ಕ್ವಾರ್ಟರ್‌ಫೈನಲ್‌ ಹಂತ ದಾಟಲೂ ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.