ಈಜು: ಇಶಾನ್‌ ಮೆಹ್ರಾಗೆ ಎರಡು ಚಿನ್ನ ಬೆಂಗಳೂರು: ಕರ್ನಾಟಕದ ಸ್ಪರ್ಧಿಗಳು ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮುಂದುವರಿಸಿದ್ದಾರೆ. ಇಶಾನ್‌ ಮೆಹ್ರಾ ಅವರು ಶುಕ್ರವಾರ ನಡೆದ ಬಾಲಕರ ‘ಗುಂಪು–2’ರ 100 ಮೀ. ಫ್ರೀಸ್ಟೈಲ್ (54.85 ಸೆ.) ಮತ್ತು 50 ಮೀ. ಬ್ಯಾಕ್‌ಸ್ಟ್ರೋಕ್‌ (28.25 ಸೆ.) ಸ್ಪರ್ಧೆಗಳಲ್ಲಿ ಚಿನ್ನ ಗೆದ್ದುಕೊಂಡರು. ಬಾಲಕರ ‘ಗುಂಪು–1’ ರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಆಕಾಶ್‌ ಮಣಿ (27.10 ಸೆ.) ಮೊದಲಿಗರಾದರು. ಬಾಲಕಿಯರ ಗುಂಪು–1ರ 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಹಷಿಕಾ ರಾಮಚಂದ್ರ (5 ನಿ. 8.50 ಸೆ.) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಎಸ್‌.ಲಕ್ಷ್ಯಾ ಬೆಳ್ಳಿ ತಮ್ಮದಾಗಿಸಿಕೊಂಡರು. 50 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ರಿಧಿಮಾ ವೀರೇಂದ್ರ (30.08 ಸೆ.) ಮೊದಲ ಸ್ಥಾನ ಪಡೆದರೆ, ಆರುಷಿ ಅಗರವಾಲ್ ಕಂಚು ಜಯಿಸಿದರು. ‘ಗುಂಪು–2’ ರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ನೈಶಾ (32.03 ಸೆ.) ಚಿನ್ನ ಜಯಿಸಿದರು. 400 ಮೀ. ಫ್ರೀಸ್ಟೈಲ್‌ನಲ್ಲಿ ತಾನ್ಯಾ ಷಡಾಕ್ಷರಿ (5 ನಿ. 25.04 ಸೆ.) ಚಿನ್ನ ಹಾಗೂ ಮೀನಾಕ್ಷಿ ಮೆನನ್ ಕಂಚು ಪಡೆದರು. 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ತನಿಷಿ ಗುಪ್ತಾ (1 ನಿ. 2.21 ಸೆ.) ಮತ್ತು ಧೀನಿಧಿ ದೇಸಿಂಗು ಅವರು ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಬಾಲಕರ ‘ಗುಂಪು–1‘ ರಲ್ಲಿ ವಿದಿತ್‌ ಎಸ್‌.ಶಂಕರ್ (200 ಮೀ. ಬ್ಯಾಕ್‌ಸ್ಟ್ರೋಕ್‌; ಬೆಳ್ಳಿ), ‘ಗುಂಪು–2’ ರಲ್ಲಿ ಆಯುಷ್‌ ಶಿವರಾಜ್ (200 ಮೀ. ಬ್ರೆಸ್ಟ್‌ಸ್ಟ್ರೋಕ್; ಬೆಳ್ಳಿ), ಪೃಥ್ವಿರಾಜ್ ಮೆನನ್ (800 ಮೀ.ಫ್ರೀಸ್ಟೈಲ್; ಬೆಳ್ಳಿ), ಪಿ.ವಿ.ಮೋನಿಷ್ (800 ಮೀ.ಫ್ರೀಸ್ಟೈಲ್; ಕಂಚು), ಎಸ್‌.ಸಿ.ಇದಾಂತ್ (50 ಮೀ. ಬ್ಯಾಕ್‌ಸ್ಟ್ರೋಕ್; ಬೆಳ್ಳಿ), ‘ಗುಂಪು–3’ ರಲ್ಲಿ ಅರ್ಜುನ್‌ ರಾಘವನ್ (100 ಮೀ. ಬ್ರೆಸ್ಟ್‌ಸ್ಟ್ರೋಕ್; ಬೆಳ್ಳಿ) ಮತ್ತು ಚೇತನ್‌ ನಾಗರಾಜ (100 ಮೀ. ಬ್ರೆಸ್ಟ್‌ಸ್ಟ್ರೋಕ್; ಕಂಚು) ಅವರು ಪದಕ ಜಯಿಸಿದರು. ಬಾಲಕಿಯರ ‘ಗುಂಪು–1’ ರಲ್ಲಿ ಅದಿತಿ ಎನ್‌.ಎಂ. (800 ಮೀ. ಫ್ರೀಸ್ಟೈಲ್‌; ಬೆಳ್ಳಿ), ರಿತಿಕಾ ಮಹೇಶ್ (100 ಮೀ. ಬಟರ್‌ಫ್ಲೈ; ಕಂಚು) ಮತ್ತು ಮಾನವಿ ಶರ್ಮಾ (50 ಮೀ. ಫ್ರೀಸ್ಟೈಲ್‌; ಕಂಚು) ಪದಕ ಗೆದ್ದುಕೊಂಡರು. ಇನ್ನೂ ಎರಡು ದಿನಗಳ ಸ್ಪರ್ಧೆಗಳು ಬಾಕಿಯಿದ್ದು, ಕರ್ನಾಟಕ 32 ಚಿನ್ನ, 28 ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.