ವಿಶ್ವ ಅಥ್ಲೆಟಿಕ್ಸ್‌ ಅಧ್ಯಕ್ಷರಾಗಿ ಕೊ ಪುನರಾಯ್ಕೆ ಬುಡಾಪೆಸ್ಟ್‌: ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ಅಧ್ಯಕ್ಷರಾಗಿ ಸೆಬಾಸ್ಟಿಯನ್‌ ಕೊ ಅವರು ಮೂರನೇ ಅವಧಿಗೆ ಗುರುವಾರ ಪುನರಾಯ್ಕೆಗೊಂಡಿದ್ದಾರೆ. 2015ರಿಂದ ಅವರು ವಿಶ್ವ ಅಥ್ಲೆಟಿಕ್ಸ್‌ ಅಧ್ಯಕ್ಷರಾಗಿದ್ದಾರೆ. ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಅವರು ಮುಂದುವರಿಯಲಿದ್ದು, ಇದು ಅವರ ಕೊನೆಯ ಅವಧಿಯಾಗಲಿದೆ. ಮಾಜಿ ಅಥ್ಲೀಟ್‌ ಆಗಿರುವ 66 ವರ್ಷದ ಕೊ 1980 (ಮಾಸ್ಕೊ) ಮತ್ತು 1984ರ (ಲಾಸ್‌ ಏಂಜಲೀಸ್‌) ಒಲಿಂಪಿಕ್ಸ್‌ನ 1,500 ಮೀ. ಓಟದಲ್ಲಿ ಚಾಂಪಿಯನ್‌ ಆಗಿದ್ದರು. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಎರಡು ದಿನ ಮೊದಲು ಹಂಗೆರಿಯ ರಾಜಧಾನಿಯಲ್ಲಿ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು. ವಿಶ್ವ ಅಥ್ಲೆಟಿಕ್ಸ್‌ ನಿಯಮಾವಳಿ ಪ್ರಕಾರ ಅವರು ನಾಲ್ಕನೇ ಅವಧಿಗೆ ಸ್ಪರ್ಧಿಸುವಂತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.