ಚೆಸ್‌: ಐದನೇ ಸುತ್ತಿಗೆ ಅರ್ಜುನ್, ವಿದಿತ್‌ ನಿಹಾಲ್ ಸರೀನ್, ದೊಮ್ಮರಾಜು ಗುಕೇಶ್, ಪ್ರಜ್ಞಾನಂದ ರಮೇಶಬಾಬು ಅವರು ಎರಡು ಪಂದ್ಯಗಳ ನಂತರ ತಮ್ಮ ಎದುರಾಳಿಗಳ ಜೊತೆ 1–1 ಸಮಬಲ ಮಾಡಿಕೊಂಡಿದ್ದು, ಶುಕ್ರವಾರ ಟೈಬ್ರೇಕರ್‌ ಆಡಬೇಕಾಗಿದೆ. ವಿದಿತ್‌ ನಾಲ್ಕನೇ ಸುತ್ತಿನಲ್ಲಿ 1.5–0.5 ರಿಂದ ಎಟಿನ್ ಬ್ಯಾಕ್ರೋಟ್‌ ಅವರನ್ನು ಸೋಲಿಸಿದರು. ಬುಧವಾರ ಮೊದಲ ಪಂದ್ಯದಲ್ಲಿ ಜಯಗಳಿಸಿದ್ದ ಅವರು ಎರಡನೇ ಪಂದ್ಯ ಡ್ರಾ ಮಾಡಿಕೊಂಡರು. ಇನ್ನೊಂದು ಪಂದ್ಯದಲ್ಲಿ ಅರ್ಜುನ್‌ 1.5–0.5 ರಿಂದ ಜಾವೊಖಿರ್ ಸಿಂಧರೋವ್ ಮೇಲೆ ಜಯಗಳಿಸಿದರು. ಅರ್ಜುನ್ ಗುರುವಾರದ ಪಂದ್ಯದಲ್ಲಿ ಯಶಸ್ಸು ಪಡೆದರು. ಬಾಕು (ಅಜರ್‌ಬೈಜಾನ್‌): ಭಾರತದ ವಿದಿತ್‌ ಸಂತೋಷ್‌ ಗುಜರಾತಿ ಮತ್ತು ಅರ್ಜುನ್‌ ಎರಿಗೇಶಿ ಅವರು ಇಲ್ಲಿನ ಮ್ಯಾರಿಯಟ್‌ ಹೋಟೆಲ್‌ನಲ್ಲಿ ನಡೆಯುತ್ತಿರುವ ವಿಶ್ವ ಕಪ್‌ ಚೆಸ್‌ ಟೂರ್ನಿಯಲ್ಲಿ ಗುರುವಾರ ತಮ್ಮ ಪಂದ್ಯಗಳನ್ನು ಗೆದ್ದು ಐದನೇ ಸುತ್ತಿಗೇರಿದರು. ನಿಹಾಲ್‌ ಸರಿನ್– ಇಯಾನ್ ನೆಪೊಮ್‌ನಿಯಾಶಿ; ಗುಕೇಶ್– ಆಂಡ್ರಿ ಇಸಿಪೆಂಕೊ; ಪ್ರಜ್ಞಾನಂದ– ಹಿಕಾರು ನಕಾಮುರ ನಡುವಣ ಎರಡನೇ ಪಂದ್ಯವೂ ‘ಡ್ರಾ’ ಆಗಿದೆ. ಬುಧವಾರ ಮೊದಲ ಪಂದ್ಯ ಸೋತಿದ್ದ ಮ್ಯಾಗ್ನಸ್‌ ಕಾರ್ಲ್‌ಸನ್ (ನಾರ್ವೆ) ಗುರುವಾರ ವಿನ್ಸೆಂಟ್ ಕೀಮರ್ ಎದುರು ಜಯಸಾಧಿಸಿದರು. ಹೀಗಾಗಿ ಈ ಪಂದ್ಯವೂ ಟೈಬ್ರೇಕರ್‌ಗೆ ಹೋಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.