ಇಂದಿನಿಂದ ಚೆಸ್‌, ಕೇರಂ ಆಯ್ಕೆ ಸ್ಪರ್ಧೆ ಬೆಳಗಾವಿ: ಇಲ್ಲಿನ ಎಲ್‌ಐಸಿ ವತಿಯಿಂದ ಆಗಸ್ಟ್‌ 17 ಹಾಗೂ 18ರಂದು ‘ದಕ್ಷಿಣ ಮಧ್ಯ ವಲಯ (ಸೌತ್‌ ಸೆಂಟ್ರಲ್‌ ಜೋನ್‌’ನ ಮಟ್ಟದ ಕೇರಂ ಹಾಗೂ ಚೆಸ್‌ ಆಯ್ಕೆ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಎಲ್‌ಐಸಿ ಹಿರಿಯ ವಿಭಾಗೀಯ ವ್ಯವಸ್ಥಾ‍ಪಕ ಬಿ.ಪಿ.ರವಿ ತಿಳಿಸಿದರು. ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಸನ್ಮಾನ್‌ ಹೋಟೆಲ್‌ ಸಭಾಂಗಣಲ್ಲಿ ಗುರುವಾರ ಬೆಳಿಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೇರಂನಲ್ಲಿ ಅಂತರರಾಷ್ಟ್ರೀಯ ಚಾಂಪಿಯನ್‌ ಆದ ಅಪೂರ್ವ ಸೇರಿದಂತೆ ಹಲವು ರಾಷ್ಟ್ರಮಟ್ಟದ ಕ್ರೀಡಾಪಟುಗಳು ಕೂಡ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಆಗಲಿದ್ದಾರೆ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಪಂದ್ಯಗಳಲ್ಲಿ ಆಯ್ಕೆಯಾದವರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಮಧ್ಯ ವಲಯವನ್ನು ಪ್ರತಿನಿಧಿಸಲಿದ್ದಾರೆ. ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಲ್‌ಐಸಿ ಈ ಅವಕಾಶ ನೀಡಿದೆ. ಶಾಲೆ– ಕಾಲೇಜು ವಿದ್ಯಾರ್ಥಿಗಳು ಹಾಗೂ ಕ್ರೀಡಾಸಕ್ತರು ಕೂಡ ಇದನ್ನು ವೀಕ್ಷಿಸಬಹುದು ಎಂದರು. ಈ ಆಯ್ಕೆ ಪಂದ್ಯಗಳಲ್ಲಿ ಒಟ್ಟು 76 ಕ್ರೀಡಾಪಟುಗಳು ತಮ್ಮ ಪ್ರತಿಭೆ ಒರೆಗೆ ಹಚ್ಚಲಿದ್ದಾರೆ. ಎರಡೂ ಪಂದ್ಯಗಲ್ಲಿ ತಲಾ ನಾಲ್ವರು ಪುರುಷರು ಹಾಗೂ ನಾಲ್ವರು ಮಹಿಳೆಯರು ಆಯ್ಕೆಯಾಗಲಿದ್ದಾರೆ. ಅಲ್ಲದೇ ಸ್ಥಳೀಯವಾಗಿ ಗೆದ್ದ ಮೊದಲ ಮೂರು ಸ್ಥಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದೂ ಅವರು ಹೇಳಿದರು. ಎಲ್‌ಐಸಿಯ ವಿವಿಧ ವಿಭಾಗಗಳು ಅಧಿಕಾರಿ ವರ್ಗದವರು, ಸಿಬ್ಬಂದಿ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.