ವಿಶ್ವ ಅಥ್ಲೆಟಿಕ್ಸ್‌: ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್ ಸಾಬ್ಳೆಗೆ ನಿರಾಸೆ ಬುಡಾಪೆಸ್ಟ್‌ : 3000 ಮೀ.ಸ್ಟೀಪಲ್‌ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್ ಸಾಬ್ಳೆ, ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ಸ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಶನಿವಾರ ನಡೆದ ಮೊದಲನೇ ಹೀಟ್ಸ್‌ನಲ್ಲಿ ಶನಿವಾರ ಏಳನೇ ಸ್ಥಾನದಲ್ಲಿ ಪೂರೈಸಿದ್ದು ನಿರಾಶಾದಾಯಕ ಎನಿಸಿತು. ಈ ಕೂಟಕ್ಕಾಗಿ ಸಾಬ್ಳೆ ಅವರು ಹೆಲವು ತಿಂಗಳಿಂದ ವಿದೇಶದಲ್ಲಿ ತರಬೇತಿ ಪಡೆದಿದ್ದರು. ಈ ಪ್ರತಿಷ್ಠಿತ ಕೂಟಕ್ಕೆ ಸಜ್ಜಾಗಲು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಂದ ಅವರಿಗೆ ವಿನಾಯಿತಿಯನ್ನೂ ನೀಡಲಾಗಿತ್ತು. ಅವರು ಶನಿವಾರ 8ನಿ.22.24 ಸೆ.ಗಳಲ್ಲಿ ಓಟ ಮುಗಿಸಿದರು. ರಾಷ್ಟ್ರೀಯ ದಾಖಲೆ (8ನಿ.11.20 ಸೆ) ಅವರ ಹೆಸರಿನಲ್ಲಿದೆ. ಮೂರು ಹೀಟ್ಸ್‌ಗಳಲ್ಲಿ ಮೊದಲ ಐದು ಸ್ಥಾನ ಪಡೆದವರು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.