ಬ್ಯಾಸ್ಕೆಟ್‌ಬಾಲ್‌: ಮಂಗಳೂರು ಕ್ಲಬ್‌ಗೆ ಜಯ ಬೆಂಗಳೂರು: ರಜತ್‌ (32 ಪಾಯಿಂಟ್ಸ್‌) ಅವರ ಉತ್ತಮ ಆಟದ ನೆರವಿನಿಂದ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡದವರು ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡ 86–53 ರಿಂದ ಬಿಎಸ್‌ಎನ್‌ಎಲ್‌ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡದವರು 47–25 ರಿಂದ ಮುನ್ನಡೆಯಲ್ಲಿದ್ದರು. ಯಂಗ್‌ ಓರಿಯನ್ಸ್ ತಂಡ 89-41 ಪಾಯಿಂಟ್ಸ್‌ಗಳಿಂದ ಎಂಎನ್‌ಕೆ ರಾವ್ ಬಿ.ಸಿ ತಂಡವನ್ನು ಮಣಿಸಿತು. ವಿಜಯಿ ತಂಡದ ಸುಮಂತ್‌ 19 ಪಾಯಿಂಟ್ಸ್‌ ಗಳಿಸಿದರು. ಜಿಎಸ್‌ಟಿ ಮತ್ತು ಕಸ್ಟಮ್ಸ್‌ ತಂಡ 101–86 ರಲ್ಲಿ ಭಾರತ್‌ ಎಸ್‌.ಯು ವಿರುದ್ಧ ಜಯಿಸಿತು. ಧೀರಜ್‌ (29) ಮತ್ತು ಸಂಯಮ್ (23) ಅವರ ಜಿಎಸ್‌ಟಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತರ ಪಂದ್ಯಗಳಲ್ಲಿ ಬೀಗಲ್ಸ್‌ ತಂಡ 64–52 ರಿಂದ ಎಸ್‌ ಬ್ಲ್ಯೂಸ್‌ ವಿರುದ್ಧ ಗೆದ್ದರೆ, ಬ್ಯಾಂಕ್‌ ಆಫ್‌ ಬರೋಡಾ 72–43 ರಿಂದ ಡಿವೈಇಎಸ್‌ ಬೆಂಗಳೂರು ತಂಡವನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.