ರಾಜ್ಯ ಎಂಟಿಬಿ ಸೈಕ್ಲಿಂಗ್; ಧನುಷ್, ನಿಥಿಲಾಗೆ ಪ್ರಶಸ್ತಿ ಬೆಂಗಳೂರು: ಆತಿಥೇಯ ಬೆಂಗಳೂರು ಜಿಲ್ಲೆಯ ಧನುಷ್ ಪ್ರಶಾಂತ್ ಮತ್ತು ನಿಥಿಲಾ ದಾಸ್ ಅವರು ಶನಿವಾರ ಆರಂಭವಾದ 18ನೇ ರಾಜ್ಯ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಡಬಲ್ ಸಾಧನೆ ಮಾಡಿದರು. ಹೆಬ್ಬಾಳದ ಏಟ್ರಿಯಾ ಕಾಲೇಜಿನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ 14 ವರ್ಷದೊಳಗಿನವರ ಬಾಲಕರ 1 ಲ್ಯಾಪ್‌ ಟೈಂ ಟ್ರಯಲ್ಸ್‌ ಹಾಗೂ 1 ಲ್ಯಾಪ‍್ ಮಾಸ್‌ ಸ್ಟಾರ್ಟ್‌ ವಿಭಾಗಗಳಲ್ಲಿ ಧನುಷ್ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದ ಇದೇ ಸ್ಪರ್ಧೆಗಳಲ್ಲಿ ನಿಥಿಲಾ ಪ್ರಥಮ ಸ್ಥಾನ ಗಳಿಸಿದರು. ಫಲಿತಾಂಶಗಳು: ಬಾಲಕರು: 14 ವರ್ಷಗೊಳಗಿನವರು: 1 ಲ್ಯಾಪ್‌ ಟೈಂ ಟ್ರಯಲ್: ಧನುಷ್ ಪ್ರಶಾಂತ್ (ಬೆಂಗಳೂರು; 10ನಿ,10.09ಸೆ)–1, ಆಶಿಶ್ ಪೌಪು ಪೌಮೈ (ಮೈಸೂರು)–2, ಆದಿತ್ಯ ಎಸ್ ಗುರವ (ಕ್ರೀಡಾ ನಿಲಯ, ಬೆಳಗಾವಿ)–3. 16 ವರ್ಷದೊಳಗಿನವರು: 1 ಲ್ಯಾಪ್‌ ಟೈಂ ಟ್ರಯಲ್: ಸವಿಯನ್ ಸಾಬು (ಬೆಂಗಳೂರು; 9ನಿ,43.80ಸೆ)–1, ಸಿ. ರುಚಿರ್ (ಮೈಸೂರು) –2, ರೆಹಾನ್ ರೋಷನ್ (ಬೆಂಗಳೂರು)–3. ‌ 18 ವರ್ಷದೊಳಗಿನವರು: 2 ಲ್ಯಾಪ್ ಟೈಂ ಟ್ರಯಲ್: ಸಮರ್ಪಣ್ ಜೈನ್ (ಮೈಸೂರು; 20ನಿ, 07.55ಸೆ)–1, ಎಸ್. ಧನಂಜಯ (ಮೈಸೂರು)–2, ಹನಮಂತ ಮರನೂರ (ಕ್ರೀಡಾ ನಿಲಯ, ವಿಜಯಪುರ)–3. 23 ವರ್ಷದೊಳಗಿನವರು: 3 ಲ್ಯಾಪ್ ಟೈಂ ಟ್ರಯಲ್: ಎಚ್‌.ಆರ್. ಲಕ್ಷ್ಮೀಶ (ಮೈಸೂರು; 30ನಿ, 39.61ಸೆ)–1, ಸಮರನ್ ಸುಬ್ಬಯ್ಯ (ಬೆಂಗಳೂರು)–2, ಎ. ಫರ್ದೀನ್ ಖಾನ್ (ಬೆಂಗಳೂರು)–3 14 ವರ್ಷದೊಳಗಿನವರು, 1 ಲ್ಯಾಪ್ ಮಾಸ್ ಸ್ಟಾರ್ಟ್: ಧನುಷ್ ಪ್ರಶಾಂತ್ (ಬೆಂಗಳೂರು; 9ನಿ,31.26ಸೆ)–1, ಆಶಿಶ್ (ಮೈಸೂರು)–2, ಕರೆಪ್ಪ ಹೆಗಡೆ (ಕ್ರೀಡಾ ನಿಲಯ; ಗದಗ)–3 ಪುರುಷರು: 3 ಲ್ಯಾಪ್‌ ಟೈಂ ಟ್ರಯಲ್: ಕೆ.ವಿ. ವೈಶಾಖ (ಮೈಸೂರು; 30ನಿ, 10.71ಸೆ)–1, ಡೆನಿಲ್ ಲೋಬೊ (ಬೆಂಗಳೂರು)–2, ಆರ್. ಜೀವನ್ (ತುಮಕೂರು)–3. ಬಾಲಕಿಯರು: 1 ಲ್ಯಾಪ್ ಟೈಂ ಟ್ರಯಲ್ಸ್: ನಿಥಿಲಾ ದಾಸ್ (ಬೆಂಗಳೂರು; 12ನಿ, 25.05ಸೆ)–1, ಶ್ರೀಯಾ ಮಾಜಿಪಾಟೀಲ (ಬೆಂಗಳೂರು)–2, ಪೂರ್ವಿ ಶಿದವಗೋಳ (ಕ್ರೀಡಾ ನಿಲಯ, ಬಾಗಲಕೋಟೆ)–3. 16 ವರ್ಷದೊಳಗಿನವರು, 1 ಲ್ಯಾಪ್‌ ಟೈಂ ಟ್ರಯಲ್: ಕಿಯಾನ ಬರುವಾ (ಬೆಂಗಳೂರು)–1, ಎಸ್‌.ಎಸ್‌. ಪ್ರಣಿತಾ (ಕ್ರೀಡಾ ನಿಲಯ, ವಿಜಯಪುರ)–2, ಆರಾಧನಾ ಸಂತೋಷ್ (ಮೈಸೂರು)–3. 18 ವರ್ಷದೊಳಗಿನವರು, 1 ಲ್ಯಾಪ್‌ ಟೈಂ ಟ್ರಯಲ್: ನಾಗಸಿರಿ ಎಚ್‌.ಎನ್. (ಮೈಸೂರು; 12ನಿ,20.03ಸೆ)–1, ಕರೇನ್ ಮಾರ್ಷಲ್ (ಮೈಸೂರು)–2, ಪವಿತ್ರಾ ಕುರ್ತಕೋಟಿ (ಗದಗ)–3. ‌14 ವರ್ಷದೊಳಗಿನವರ: 1 ಲ್ಯಾಪ್ ಮಾಸ್‌ ಸ್ಟಾರ್ಟ್: ನಿಥಿಲಾ ದಾಸ್ (ಬೆಂಗಳೂರು)–1, ಶ್ರೀಯಾ ಮಾಜಿಪಾಟೀಲ (ಬೆಂಗಳೂರು)–2, ಪೂರ್ವಿ ಶಿದವಗೋಳ (ಕ್ರೀಡಾ ನಿಲಯ, ಬಾಗಲಕೋಟೆ)–3. ಮಹಿಳೆಯರು: ಸ್ಟಾರ್ ನರ್ಜರಿ (ಬೆಂಗಳೂರು; 23ನಿ,46.09ಸೆ)–1, ಅಕ್ಷತಾ ಬಿರಾದಾರ (ಕ್ರೀಡಾ ನಿಲಯ, ವಿಜಯಪುರ)–2, ಆರತಿ ಭಾಟಿ (ವಿಜಯಪುರ)–3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.