ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌: ಬೆಂಗಳೂರು ಜಿಲ್ಲೆಗೆ ಸಮಗ್ರ ಪ್ರಶಸ್ತಿ ಬೆಂಗಳೂರು: ಆತಿಥೇಯ ಬೆಂಗಳೂರು ಜಿಲ್ಲೆ ತಂಡವು ಭಾನುವಾರ ಮುಕ್ತಾಯಗೊಂಡ 18ನೇ ರಾಜ್ಯ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಮೈಸೂರು ಜಿಲ್ಲೆಯು ರನ್ನರ್ಸ್ ಅಪ್ ಆಯಿತು. ರಾಜ್ಯ ಅಮೆಚೂರ್‌ ಸೈಕ್ಲಿಂಗ್‌ ಸಂಸ್ಥೆ ಮತ್ತು ಏಟ್ರಿಯಾ ತಾಂತ್ರಿಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಜಿಲ್ಲೆ 66 ಹಾಗೂ ಮೈಸೂರು ಜಿಲ್ಲೆ 59 ಅಂಕ ಗಳಿಸಿದವು. ಫಲಿತಾಂಶಗಳು: ಬಾಲಕರು: 16 ವರ್ಷದೊಳಗಿನವರು: 2 ಲ್ಯಾಪ್ ಮಾಸ್ ಸ್ಟಾರ್ಟ್: ಸವಿಯನ್ ಸಾಬು (ಬೆಂಗಳೂರು)–1,‌ ಸಿ. ರುಚಿರ್‌ (ಮೈಸೂರು)–2, ರಿಹಾನ ರೋಷನ್ (ಬೆಂಗಳೂರು)–3. 18 ವರ್ಷದೊಳಗಿನವರು: 3 ಲ್ಯಾಪ್ ಮಾಸ್ ಸ್ಟಾರ್ಟ್: ಸಮರ್ಪಣ್ ಜೈನ್‌ (ಮೈಸೂರು)–1, ಎಸ್. ಧನಂಜಯ (ಮೈಸೂರು)–2, ಹನಮಂತ ಮರನೂರ (ಕ್ರೀಡಾ ನಿಲಯ, ವಿಜಯಪುರ)–3. ಪುರುಷರು: 3 ಲ್ಯಾಪ್ ಮಾಸ್ ಸ್ಟಾರ್ಟ್: ಕೆ.ವಿ. ವೈಶಾಖ್ (ಮೈಸೂರು)–1, ಡೆನಿಲ್ ಲೋಬೊ (ಬೆಂಗಳೂರು)–2, ಆರ್. ಜೀವನ್ (ತುಮಕೂರು)–3. ಬಾಲಕಿಯರು: 16 ವರ್ಷದೊಳಗಿನವರು: 1 ಲ್ಯಾಪ್ ಮಾಸ್ ಸ್ಟಾರ್ಟ್: ರೇಣುಕಾ ಕಾಖಂಡಕಿ (ಕ್ರೀಡಾ ನಿಲಯ, ಬಾಗಲಕೋಟೆ)–1, ಕೈನಾ ಬರುಹಾ (ಬೆಂಗಳೂರು)– 2, ಎಸ್.ಎಸ್. ಪರಣಿತಾ (ಕ್ರೀಡಾ ನಿಲಯ, ವಿಜಯಪುರ)–3. 18 ವರ್ಷದೊಳಗಿನವರು: 2 ಲ್ಯಾಪ್ ಮಾಸ್ ಸ್ಟಾರ್ಟ್: ಕರೇನ್ ಮಾರ್ಷಲ್ (ಮೈಸೂರು)–1, ಎಚ್.ಎನ್. ನಾಗಸಿರಿ (ಮೈಸೂರು)–2, ಪವಿತ್ರಾ ಕುರ್ತಕೋಟಿ (ಗದಗ)–3. ಮಹಿಳೆಯರು: 2 ಲ್ಯಾಪ್ ಮಾಸ್ ಸ್ಟಾರ್ಟ್: ಸ್ಟಾರ್ ನರ್ಝರಿ (ಬೆಂಗಳೂರು; 23 ನಿ.46.09 ಸೆ)–1, ಅಕ್ಷತಾ ಬಿರಾದಾರ್ (ಕ್ರೀಡಾ ನಿಲಯ, ವಿಜಯಪುರ)–2, ಆರತಿ ಭಾಟಿ (ವಿಜಯಪುರ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.