ಮಂಗಳಾ ಕಪ್ ಬ್ಯಾಡ್ಮಿಂಟನ್ ಟೂರ್ನಿ:ಸಂಸ್ಕೃತಿಗೆ ಬಾಲಕಿಯರ ವಿಭಾಗದ ಪ್ರಶಸ್ತಿ ಮಂಗಳೂರು: ಎದುರಾಳಿಯ ಪೈಪೋಟಿಯನ್ನು ಮೀರಿನಿಂತ ಬೆಂಗಳೂರಿನ ಅರೈಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಸಂಸ್ಕೃತಿ ಎಸ್‌, ಮಂಗಳೂರಿನ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಯೋಜಿಸಿರುವ ‘ಮಂಗಳಾ ಕಪ್‌ ಜೂನಿಯರ್‌’ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ 9 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ನಗರದ ಯು.ಎಸ್‌.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಏಕೈಕ ಗೇಮ್‌ನ ಫೈನಲ್‌ ಪಂದ್ಯದಲ್ಲಿ ಸಂಸ್ಕೃತಿ, ಬೆಂಗಳೂರಿನ ಓವಲ್‌ನೆಟ್ ಅರೇನಾದ ಯಶೋನಿಧಿ ಟಿ ವಿರುದ್ಧ 30–15ರಲ್ಲಿ ಜಯ ಗಳಿಸಿದರು. ಸೆಮಿಫೈನಲ್‌ನಲ್ಲಿ ಪತ್ರಾವೊ ಬ್ಯಾಡ್ಮಿಂಟನ್ ಅಕಾಡೆಮಿಯ ಸ್ವೀಡಲ್ ಸಾನ್ವಿ ಡಿಸೋಜ ವಿರುದ್ಧ ಸಂಸ್ಕೃತಿ 30–8ರಲ್ಲಿ ಮತ್ತು ಅರೈಸ್ ಅಕಾಡೆಮಿಯ ಮಾನ್ಯ ಆಚಾರ್ಯ ವಿರುದ್ಧ ಯಶೋನಿಧಿ 30–13ರಲ್ಲಿ ಜಯ ಗಳಿಸಿದ್ದರು. ಸೆಮಿಫೈನಲ್‌ಗೆ ದಿಯಾ, ಆಯಿಷಾ 19 ವರ್ಷದೊಳಗಿನ ಬಾಲಕಿಯರ ಕ್ವಾರ್ಟರ್ ಫೈನಲ್‌ನಲ್ಲಿ ದಿಯಾ ಮನೋಜ್ ಶೆಟ್ಟಿ 30–9ರಲ್ಲಿ ರೇವತಿ ಯು ವಿರುದ್ಧ ಜಯ ಗಳಿಸಿದರು. ನಿಧಿ ಎಂ.ಎಸ್ ವಿರುದ್ಧ ಆಯಿಶಾ ರಿಜಾ 30–23ರಲ್ಲಿ, ರೀನಾ ಪೆರೇರಾ ವಿರುದ್ಧ ಬಿಂದುಶ್ರೀ 30–26ರಲ್ಲಿ, ಸಾಚಿ ಶೆಟ್ಟಿ ವಿರುದ್ಧ ಟ್ರೈವಿಯ ವೇಗಸ್‌ 30–7ರಲ್ಲಿ ಗೆಲುವು ಸಾಧಿಸಿದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಿಯಾ ಮನೋಜ್ ಶೆಟ್ಟಿ 30–15ರಲ್ಲಿ ಸಾಚಿ ಶೆಟ್ಟಿ ವಿರುದ್ಧ, ಅದಿತಿ ಆಚಾರ್ಯ 30–17ರಲ್ಲಿ ನಯೊನಿಕಾ ವಿರುದ್ಧ, ರೀನಾ ಪೆರೇರಾ 30–27ರಲ್ಲಿ ಸಾನ್ವಿ ವಿರುದ್ಧ, ತನ್ವಿ ಶೆಟ್ಟಿ 30–20ರಲ್ಲಿ ಕಿಯೋರ ಪಾಯಸ್‌ ವಿರುದ್ಧ ಗೆದ್ದರು. 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಯೊನಿಕಾ ಎದುರು ಸ್ಮೃತಿ ಎಸ್‌ 30–29ರಲ್ಲಿ, ಸಾಚಿ ಶೆಟ್ಟಿ ವಿರುದ್ಧ ಅಂಬಿಕಾ ನಾಯರ್ 30–22ರಲ್ಲಿ, ಲೇಖನಿ ವಿರುದ್ಧ ಸುಮೇಧಾ ಶ್ರೀನಿವಾಸ್ 30–18ರಲ್ಲಿ ಮತ್ತು ಅನಿಶಾ ದೇವಾಡಿಗ ವಿರುದ್ಧ ಅದಿತಿ ಆಚಾರ್ಯ 30–16ರಲ್ಲಿ ಜಯ ಸಾಧಿಸಿದರು. 13 ವರ್ಷದೊಳಗಿನ ಬಾಲಕಿಯರ ಕ್ವಾರ್ಟರ್ ಫೈನಲ್‌ನಲ್ಲಿ ಸ್ತುತಿ ಎಸ್‌ ಶೆಟ್ಟಿ ವಿರುದ್ಧ ರಿಧಿ ದೇವಯ್ಯ 30–10ರಲ್ಲಿ, ಶಾನ್ವಿ ವಿರುದ್ಧ ಅದಿತಿ ಸುಶಾಂತ್‌ 30–13ರಲ್ಲಿ, ಆಶ್ಲಿನ್ ವಿರುದ್ಧ ತಾನಿಯಾ ಕೆ 30–27ರಲ್ಲಿ ಜಯ ಗಳಿಸಿದರು. 11 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಲಿವಾನಾ ಶೆಟ್ಟಿ ವಿರುದ್ಧ ಅದಿತಿ ಸುಶಾಂತ್‌ 30–12ರಲ್ಲಿ, ಶ್ರಾವಣಿ ವಿರುದ್ಧ ಜ್ಯೋತಿಕಾ ಬೆನ್ನೂರು 30–19ರಲ್ಲಿ, ಭವಾನಿ ಕಾಟ್ಕರ್ ವಿರುದ್ಧ ಶಾನ್ವಿ 30–14ರಲ್ಲಿ ಹಾಗೂ ಸ್ತುತಿ ಶೆಟ್ಟಿ ವಿರುದ್ಧ ಶಿಖಾ ಶ್ರೀಜಿತ್ 30–21ರಲ್ಲಿ ಗೆಲುವು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.