ಡಿವಿಷನ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಐಬಿಬಿಸಿ ತಂಡಕ್ಕೆ ಜಯ ಬೆಂಗಳೂರು: ಯಶ್ವಂತ್‌ ಮತ್ತು ಸುರೇಶ್‌ ಅವರ ಉತ್ತಮ ಆಟದ ನೆರವಿನಿಂದ ಐಬಿಬಿಸಿ ತಂಡದವರು ಪ್ರೊ.ಎನ್‌.ಸಿ ಪರಪ್ಪ ಸ್ಮಾರಕ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಐಬಿಬಿಸಿ 77–73 ರಿಂದ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು. ಯಶ್ವಂತ್‌ 30 ಹಾಗೂ ಸುರೇಶ್‌ 21 ಪಾಯಿಂಟ್ಸ್ ಗಳಿಸಿದರು. ಇನ್ನೊಂದು ರೋಚಕ ಪಂದ್ಯದಲ್ಲಿ ಡಿವೈಇಎಸ್‌ ಬೆಂಗಳೂರು ತಂಡ 100–97 ರಿಂದ ಭಾರತ್‌ ಸ್ಪೋರ್ಟ್ಸ್‌ ಯೂನಿಯನ್‌ ತಂಡವನ್ನು ಪರಾಭವಗೊಳಿಸಿತು. ಪಾಯಿಂಟ್ಸ್‌ ಗಳಿಕೆಯಲ್ಲಿ ಅರ್ಧಶತಕ ಗಳಿಸಿದ ಮನೋಜ್‌ (54) ಅವರು ಡಿವೈಇಎಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ್‌ ತಂಡದ ಪರ ಅಕ್ಷಯ್ 35 ಪಾಯಿಂಟ್ಸ್‌ ಗಳಿಸಿದರು. ಎಸ್‌.ಬ್ಲೂಸ್‌ ತಂಡ 67–50 ರಿಂದ ಬಿಎಸ್‌ಎನ್‌ಎಲ್‌ ವಿರುದ್ಧ ಗೆದ್ದಿತು. ವಿಜಯಿ ತಂಡದ ಡೆನ್ಸಿಲ್ 23 ಪಾಯಿಂಟ್ಸ್‌ ತಂದಿತ್ತರು. ಜಿಎಸ್‌ಟಿ ಮತ್ತು ಕಸ್ಟಮ್ಸ್ ತಂಡ 99–86 ರಿಂದ ಎಂಎನ್‌ಕೆ ರಾವ್ ಪಾರ್ಕ್‌ ಬಿ.ಸಿ ತಂಡವನ್ನು ಸೋಲಿಸಿತು. ಜಿಎಸ್‌ಟಿ ತಂಡದ ಧೀರಜ್‌ 34 ಮತ್ತು ಸಂಯಮ್ 25 ಪಾಯಿಂಟ್ಸ್‌ ಕಲೆಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.