ಈಜು ಸ್ಪರ್ಧೆ: ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ ಬೀರೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈಚೆಗೆ ಸಂಗಮೇಶ್ವರ ಪೇಟೆಯ ಪೂರ್ಣಪ್ರಜ್ಞ ವಿದ್ಯಾಲಯದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ನೇರ ಸ್ಪರ್ಧೆಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕ್ರಮುಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಮನಿಶ್ ಬಿಜಿ 50ಮೀ ಹಾಗೂ 100ಮೀ ಬ್ಯಾಕ್ ಸ್ಟ್ರೋಕ್‍ನಲ್ಲಿ (ಪ್ರಥಮ) ಮತ್ತು 50ಮೀ ಫ್ರೀಸ್ಟೈಲ್‍ನಲ್ಲಿ (ದ್ವಿತೀಯ), ಜೀವನ್ ಎಚ್ ಆರ್ 50ಮೀ ಹಾಗೂ 100ಮೀ ಫ್ರೀಸ್ಟೈಲ್‍ನಲ್ಲಿ (ದ್ವಿತೀಯ), ರವಿಕುಮಾರ್ 50ಮೀ ಫ್ರೀಸ್ಟೈಲ್‍ನಲ್ಲಿ (ದ್ವಿತೀಯ), ಕಿಶೋರ್ ಪಾಟಿಲ್ ಕೆ ಎಸ್ 100ಮೀ ಬ್ಯಾಕ್ ಸ್ಟ್ರೋಕ್‍ನಲ್ಲಿ (ಪ್ರಥಮ) ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಶರ್ವಾಣಿ ಬಿವಿ 50ಮೀ ಮತ್ತು 100ಮೀ ಬ್ರೆತ್ ಸ್ಟ್ರೋಕ್‍ನಲ್ಲಿ (ಪ್ರಥಮ) ಮತ್ತು 100ಮೀ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್‌ಷಿಪ್‍ಗೆ ಭಾಜನರಾದರೆ, ಎ.ಬಿ.ನಿಶ್ಮಿತ 50ಮೀ ಹಾಗೂ 100ಮೀ ಫ್ರೀಸ್ಟೈಲ್ ಮತ್ತು 100ಮೀ ರಿಲೆ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪಟ್ಟ ಪಡೆದರು. 100ಮೀ ರಿಲೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಗ್ರೀಷ್ಮ ಜಿ ಆರ್ ಮತ್ತು ಗೌತಮಿ ಕೂಡಾ (ಪ್ರಥಮ) ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ, ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರ ಶ್ರೇಷ್ಠಿ, ಕ್ರೀಡಾ ಕಾರ್ಯದರ್ಶಿ ಎಸ್.ಎಸ್.ದೇವರಾಜ್, ನಿರ್ದೇಶಕರು ಹಾಗೂ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.